March 21, 2026

ಪುತ್ತೂರು: ವಿದೇಶಕ್ಕೆ ಉದ್ಯೋಗಕ್ಕೆ ತೆರಳಿರುವ ಮಹಿಳೆಯನ್ನು ಕೂಡಿ ಹಾಕಿ ಹಿಂಸೆ ಆರೋಪ: ಮಹಿಳೆಯಿಂದ ದಲಿತ್‌ ಸೇವಾ ಸಮಿತಿ ಮುಖಂಡರಿಗೆ ಮೊಬೈಲ್‌ ವಾಯ್ಸ ಮೆಸೇಜ್‌ ಸಂದೇಶ

0
New-Kuwait-City-Empty-plots-of-land-are-scattered-throughout-the-new-city-where-once-the_Q640.jpg

ಪುತ್ತೂರು: ಕುವೈಟ್‌ನಲ್ಲಿ ಉದ್ಯೋಗಕ್ಕೆ ತೆರಳಿರುವ ಪುತ್ತೂರಿನ ಮಹಿಳೆಯನ್ನು ಸಂಸ್ಥೆಯೊಂದು ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡುತ್ತಿರುವ ಕುರಿತು ಮಹಿಳೆಯು ಪುತ್ತೂರಿನ ದಲಿತ್‌
ಸೇವಾ ಸಮಿತಿ ಮುಖಂಡರೊಬ್ಬರಿಗೆ ಮೊಬೈಲ್‌ ವಾಯ್ಸ ಮೆಸೇಜ್‌
ಮೂಲಕ ಸಂದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ತಮಿಳುನಾಡಿನ ನಿವಾಸಿ, ಉರ್ಲಾಂಡಿಯಲ್ಲಿ ವಾಸ್ತವ್ಯ ಹೊಂದಿರುವ ನಾಗಮ್ಮ ಅವರು 10 ತಿಂಗಳ ಹಿಂದೆ ಉದ್ಯೋಗಕ್ಕೆಂದು ಏಜೆನ್ಸಿಯ ಮೂಲಕ ಕುವೈಟ್‌ಗೆ ತೆರಳಿದ್ದರು.

ಇನ್ನು ಮಹಿಳೆಗೆ ಆರೋಗ್ಯದ ಸಮಸ್ಯೆ ಕಾಡಿದ್ದು ಅಲ್ಲಿನ ಸಂಸ್ಥೆಯುವರು ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಈ ಕುರಿತು ಪುತ್ತೂರಿನ ದಲಿತ್‌ ಸೇವಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಅವರಿಗೆ ಮೊಬೈಲ್‌ ವಾಯ್ಸ ಮೆಸೇಜ್‌ ಮಾಡಿದ್ದಾರೆ.

‘ನಾನು ಅನಾರೋಗ್ಯದಿಂದ ಬಳಲುತ್ತಿದ್ದು ನನಗೆ ಸರಿಯಾದ ಔಷಧ ನೀಡುತ್ತಿಲ್ಲ, ಅನಾರೋಗ್ಯ ಇದ್ದರೆ ವಿದೇಶಕ್ಕೆ ಯಾಕೆ ಬಂದದ್ದು ಎಂದು ಬೆದರಿಸಿ ಕೋಣೆಯೊಳಗೆ ಕೂಡಿ ಹಾಕಿದ್ದಾರೆ. ದಿನಕ್ಕೆ ಒಂದು ಹೊತ್ತು ಮಾತ್ರ ಆಹಾರ ನೀಡುತ್ತಿದ್ದಾರೆ. ನನ್ನೊಂದಿಗೆ ಶ್ರೀಲಂಕದ ಮಹಿಳೆಯರು ಇದ್ದಾರೆ ಎನ್ನುವ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!