ಬಂಟ್ಟಾಳ: ಸುರಿಬೈಲು ಯುವಕನ ಕೊಲೆ ಪ್ರಕರಣ: ಹಲವಾರು ಮಂದಿ ವಶಕ್ಕೆ: ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ಚುರುಕು
ಬಂಟ್ವಾಳ: ಸುರಿಬೈಲು ಯುವಕನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದ ತಂಡ ಹಲವಾರು ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ನ. 1 ರಂದು ಬಂಟ್ವಾಳ ತಾಲೂಕಿನ ಇರಾ ಪದವು ಜನನಿಬಿಡ ಗುಡ್ಡವೊಂದರಲ್ಲಿ ಬೊಳಂತೂರು ಕಟ್ಟೆಪುನಿ ನಿವಾಸಿ ರಿಕ್ಷಾ ಚಾಲಕ ಅದ್ರಾಮನ ಕಾಮದಾಟಕ್ಕೆ 19 ರ ಹರೆಯದ ಯುವಕ ಸಮಾದ್ ಬಲಿಯಾಗಿದ್ದು, ಆತನನ್ನು ಸೀಮೆ ಎಣ್ಣೆ ಸುರಿದು ಬೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಮೃತದೇಹವನ್ನು ಅಳೆತ್ತರದ ಗುಂಡಿಗೆ ಎಸೆಯಲಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ತೀರಾ ತಲೆಕೆಡಿಸಿಕೊಂಡಿದ್ದ ಪೊಲೀಸ್ ಇಲಾಖೆ ಆರೋಪಿ ಅದ್ರಾಮನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ದೃಷ್ಟಿಯಿಂದ ಪೋಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು.
ವಿಚಾರಣೆ ಬಳಿಕ ಈ ಕೊಲೆಗೆ ಸಂಬಂಧಿಸಿದಂತೆ ಅದ್ರಾಮನ ಜೊತೆ ನಿಕಟ ಸಂಬಂಧ ಹೊಂದಿದ ಹಾಗೂ ಆತನ ಜೊತೆಯಲ್ಲಿ ಕೊಲೆ ಮಾಡಿದ ಸಂಪರ್ಕದಲ್ಲಿದ್ಸ ಹಲವಾರು ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯಿಂದ ರಿಕ್ಷಾ ಸಹಿತ ಅನೇಕ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಪೊಲೀಸರಿಗೆ ಈ ಕೊಲೆಯ ಬಗ್ಗೆ ಹಲವಾರು ಸಂಶಯಗಳು ಮೂಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕೊಲೆಗೆ ಇತರ ವ್ಯಕ್ತಿಗಳ ಕೈವಾಡವಿದೆಯಾ ಮತ್ತು ಗಾಂಜಾ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.





