March 20, 2026

ಜಿಮ್ ನಲ್ಲಿ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ಮೃತ್ಯು

0
Siddhaanth-Surryavanshi-3.jpg

ಮುಂಬೈ: ಹಿಂದಿ ಕಿರುತೆರೆ ನಟ ಸಿದ್ಧಾಂತ್ ಸೂರ್ಯವಂಶಿ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.

‘ಕುಸುಮ್’ ಮತ್ತು ‘ಕಸೌತಿ ಜಿಂದಗಿ ಕೇ’ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ನಟ ನಟ ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ಸೂರ್ಯವಂಶಿಯಿಂದ ಸಿದ್ದಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದರು.

ಇನ್ನು ಸಿದ್ಧಾಂತ್ ಅವರು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದು, ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ.

ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!