March 20, 2026

ವಿಟ್ಲ ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ “ಕನ್ನಡ ಡಿಂಡಿಮ-2022

0
IMG-20221111-WA0050

ವಿಟ್ಲ:  ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವದ  ಅಂಗವಾಗಿ  ಧ್ವಜಾರೋಹಣ ಮತ್ತು ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.   

ಕಾರ್ಯಕ್ರಮದ ಪ್ರಾರಂಭದಲ್ಲಿ ಅಥಿತಿಯಾಗಿ ಆಗಮಿಸಿದ್ದ ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ನೌಶೀನ್ ಬದ್ರಿಯಾ ರವರು ಧ್ವಜಾರೋಹಣ ಮಾಡಿ ಶುಭಹಾರೈಸಿದರು.

ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಪತ್ರಕರ್ತ, ಬರಹಗಾರ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ಸದಸ್ಯ ಶಂಶೀರ್ ಬುಡೋಳಿರವರು ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಮಾತ್ರವಲ್ಲದೇ ಎಲ್ಲಾ ಚಟುವಟಿಕೆಗಳು, ಕಲೆ, ಕ್ರೀಡೆ ಇತರ ಎಲ್ಲಾ ಕ್ಷೇತ್ರಗಳಲ್ಲಿ   ತರಬೇತಿ  ನೀಡಿ  ಮಕ್ಕಳ ಸರ್ವತ್ತೋಮುಖ     ಅಭಿವೃಧ್ದಿಗೆ ಒತ್ತು ನೀಡುವ ನಿಟ್ಟಿನಲ್ಲಿ ಜನಪ್ರಿಯ ಸ್ಕೂಲ್ ನ ಆಡಳಿತ ಮಂಡಳಿ ಮತ್ತು ಶಿಕ್ಷಕರು ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಇಂತಹ ಶಿಕ್ಷಣ ಸಂಸ್ಥೆಗಳಿಗೆ ಎಲ್ಲರೂ ಪ್ರೋತ್ಸಾಹ  ನೀಡುವ ಅಗತ್ಯತೆ ಇದೆ ಎಂದು ಹೇಳಿ ಮಕ್ಕಳಿಗೆ  ಕನ್ನಡ ಹಬ್ಬದ ಶುಭಾಷಯ ಕೋರಿದರು

ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಶಂಶೀರ್ ಬುಡೋಳಿರವರನ್ನು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಶಾಲೆಯ ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ರವರು ಮಾತನಾಡಿ ಮಕ್ಕಳಿಗೆ ಕನ್ನಡ ನಾಡು, ಸಂಸ್ಕ್ರತಿ, ಭಾಷೆಯ ಮಹತ್ವವನ್ನು ಮಕ್ಕಳಿಗೆ ಸವಿವರವಾಗಿ ತಿಳಿಸಿದರು.
ಪ್ರಾಂಶುಪಾಲರಾದ ಶ್ರೀಮತಿ ಪ್ರಿಯಾ ದುರೈರಾಜ್ ರವರು ಮಕ್ಕಳಿಗೆ ಶುಭಹಾರೈಸಿದರು

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳು ನೃತ್ಯ, ನಾಡಗೀತೆ, ಒನಕೆ ಓಬವ್ವರ ನಾಟಕ, ಭಾಷಣ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳಾದ ನಫೀಸ ಸ್ವನೀಹ ಸ್ವಾಗತಿಸಿ, ಶಝ್ನ ವಂದಿಸಿದರು.
ಹಿಬಾ ಮರಿಯಂ ಮತ್ತು ಝುಲ್ಫಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!