ಮಂಗಳೂರು: ಖಾಸಗಿ ಬಸ್ ನಲ್ಲಿ ವೈದ್ಯೆಗೆ ಅಸಭ್ಯ ವರ್ತನೆ: ಬಸ್ ಕ್ಲೀನರ್ ಬಂಧನ
ಮಂಗಳೂರು: ಖಾಸಗಿ ಬಸ್ನಲ್ಲಿ ಲೇಡಿ ಡಾಕ್ಟರ್ ಪ್ರಯಾಣಿಕರೊಬ್ಬರ ಜತೆ ಖಾಸಗಿ ಬಸ್ ಕ್ಲೀನರ್ ಮಹಮ್ಮದ್ ಇಮ್ರಾನ್ (26) ಅಸಭ್ಯ ವರ್ತನೆ ತೋರಿದ್ದಾನೆ.
ಆತನನ್ನು ಬಂಧಿಸಲಾಗಿದೆ ಬಂಧಿತ ಆರೋಪಿ, ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ವೈದ್ಯೆ ಜತೆ ದುರ್ವತನೆ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 151/2022 U/s 354ರಡಿ ಕೇಸ್ ದಾಖಲುಗೊಂಡಿದೆ. ಖಾಸಗಿ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು.




