ಭಾರತ್ ಜೋಡೋ ಯಾತ್ರೆ ವೇಳೆ ಕೆಜಿಎಫ್ ಚಲನಚಿತ್ರದ ಹಾಡು ಬಳಕೆ: ಕಾಂಗ್ರೆಸ್‌ನ ಎರಡು ಟ್ವಿಟರ್ ಖಾತೆ ಬ್ಲಾಕ್
ಬೆಂಗಳೂರು: ಭಾರತ್ ಜೋಡೋ ಯಾತ್ರೆ ವೇಳೆ ಒಪ್ಪಿಗೆರಹಿತವಾಗಿ ಕೆಜಿಎಫ್ ಚಲನಚಿತ್ರದ ಹಾಡನ್ನು ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಎರಡು ಟ್ವಿಟರ್ ಖಾತೆಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ.
ಕಾಂಗ್ರೆಸ್‌ನ ಟ್ವಿಟರ್ ಖಾತೆಗಳಿಗೆ ಸ್ಥಳೀಯ ಕೋರ್ಟ್ ತಾತ್ಕಾಲಿಕ ನಿರ್ಬಂಧವನ್ನು ಹೇರಿಕೆ ಮಾಡಿದೆ. ಒಪ್ಪಿಗೆಯಿಲ್ಲದೆ ಕೆಜಿಎಫ್ ಹಾಡನ್ನು ಬಳಸಿಕೊಂಡಿದ್ದಕ್ಕಾಗಿ ಕಾಪಿರೈಟ್ ಉಲ್ಲಂಘನೆ ಮಾಡಲಾಗಿದೆ ಎಂದು ಎಂಅರ್‌ಟಿ ಮ್ಯೂಸಿಕ್ ಕಂಪೆನಿಯು ದೂರು ದಾಖಲಿಸಿತ್ತು. ದೂರು ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಕಾಂಗ್ರೆಸ್‌ನ ಎರಡು ಟ್ವಿಟರ್ ಖಾತೆಗಳಿಗೆ ನಿರ್ಬಂಧ ಹೇರಿದೆ.




