ರೈತರ ಸಭೆಯಲ್ಲಿ ಕಲ್ಲು ತೂರಾಟ: ಪೊಲೀಸ್ ಸೇರಿ ಹಲವರಿಗೆ ಗಾಯ
ಮಹಾಲಿಂಗಪುರ : ಸೋಮವಾರ ಮುಂಜಾನೆಯಿಂದ ರಾತ್ರಿ 9 ವರೆಗೆ ಸಮೀರವಾಡಿ ದರ ನಿಗದಿ ಸಭೆಯಲ್ಲಿ ಸುಮಾರು 5-6 ಸಾವಿರ ರೈತರು ಭಾಗವಹಿಸಿದ್ದರು.
ಸೋಮವಾರ ರಾತ್ರಿ 9ವರೆಗೆ ಸಭೆ ನಡೆದರೂ ದರ ಘೋಷಣೆಯಾಗದ ಹಿನ್ನಲೆಯಲ್ಲಿ ಉದ್ರಿಕ್ತ ಹೋರಾಟಗಾರು ಸಮೀರವಾಡಿ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಈ ಗಲಾಟೆಯಲ್ಲಿ ಅವರನ್ನು ರಕ್ಷೀಸಲು ಹೋದ ಬನಹಟ್ಟಿ ಸಿಪಿಐ ಐ.ಎಂ.ಮಠಪತಿ ಹಾಗೂ ಜಮಖಂಡಿ ಗ್ರಾಮೀಣ ಠಾಣಾಧಿಕಾರಿ ಬಿರಾದರ್ ಮೇಡಂ ಅವರಿಗೆ ಕಲ್ಲು ಬಡಿದು ಸಣ್ಣಪುಟ್ಟ ಗಾಯಗಳಾಗಿವೆ. ಗಲಾಟೆಯಲ್ಲಿ 3-4 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.




