ಮದ್ಯಪಾನ ಮಾಡಿ, ಗುಟ್ಕಾ ತಿನ್ನಿ ಎಂದ ಬಿಜೆಪಿ ಸಂಸದ
ಭೋಪಾಲ್: ಮದ್ಯಪಾನ ಬೇಕಾದರೂ ಮಾಡಿ, ಗುಟ್ಕಾ ಬೇಕಾದರೂ ತಿನ್ನಿ, ಅಯೋಡೆಕ್ಸ್‌ನಾದ್ರೂ ತಿನ್ನಿ ಎಂದು ನೀರಿನ ಸಂರಕ್ಷಣೆ ಕುರಿತಂತೆ ಸಲಹೆ ನೀಡುವ ಭರದಲ್ಲಿ ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ಜಿಲ್ಲೆಯ ರೇವಾದ ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ ಜಲ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಮೀನುಗಳು ನೀರಿನಿಂದ ಬತ್ತಿ ಹೋಗುತ್ತಿದ್ದು, ಅವುಗಳನ್ನು ಉಳಿಸಬೇಕು.
ನೀವು ಗುಟ್ಕಾನಾದ್ರೂ ತಿನ್ನಿ, ಮದ್ಯನಾದ್ರೂ ಸೇವಿಸಿ, ವಾಸನೆ ಬರುವ ಅಯೋಡೆಕ್ಸ್ ಆದ್ರೂ ತಿನ್ನಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.




