February 1, 2026

ಪೊಲೀಸ್ ಠಾಣೆಯಲ್ಲೇ ಪೊಲೀಸರ ಸಮವಸ್ತ್ರ ಹರಿದು ಹಲ್ಲೆ, ಜೀವ ಬೆದರಿಕೆ – ಇಬ್ಬರ ಬಂಧನ

0
IMG-20221107-WA0038.jpg

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಸೇರಿದಂತೆ ಪೊಲೀಸರ ಸಮವಸ್ತ್ರ ಹರಿದು, ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಪೊಲೀಸ್ ಠಾಣೆಯಲ್ಲೇ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು ಬೇಳೂರು ಗ್ರಾಮದ ಮಕ್ಕಿಮನೆ ವಾಸಿಗಳಾದ ಕೃಷ್ಣಮೂರ್ತಿ (45), ರಾಮಚಂದ್ರ (50 ) ಎಂದು ಗುರುತಿಸಲಾಗಿದೆ.

ಹರೀಶ್ ನೀಡಿದ ದೂರಿನ ಅನ್ವಯ ಕೃಷ್ಣಮೂರ್ತಿ ಮತ್ತು ರಾಮಚಂದ್ರ ಎಂಬುವರನ್ನು ಪಿಎಸ್‌ಐ ನಾಗರಾಜ್, ಹೆಚ್ ಸಿ ವೆಂಕಟೇಶ್ ಮತ್ತು ದೇವರಾಜ ನಾಯ್ಕ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ತಮ್ಮ ಕೃಷ್ಣಮೂರ್ತಿ ಮತ್ತು ರಾಮಚಂದ್ರ ಸಮವಸ್ತ್ರ ಹರಿದು, ಅವಾಚ್ಯವಾಗಿ ಬೈದು, ಹಲ್ಲೆ ಮಾಡಿ, ಜೀವ ಬೆದರಿಕೆಯನ್ನು ಹಾಕಿದ್ದಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!