August 13, 2026

ಪುತ್ತೂರು: ನೇಣು ಬಿಗಿದು ನವವಿವಾಹಿತೆ ಆತ್ಮಹತ್ಯೆ

0
IMG-20221105-WA0021.jpg

ಪುತ್ತೂರು: ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ವಿವಾಹಿತೆಯೊಬ್ಬರು ಪತಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಸಂಜೆ ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ನಡೆದಿದೆ.

ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ ವೈಶಾಲಿ (26) ಆತ್ಮಹತ್ಯೆ ಮಾಡಿಕೊಂಡವರು.

ವೈಶಾಲಿ ಅವರ ವಿವಾಹ ಜಯಪ್ರಕಾಶ್ ಅವರ ಜತೆ 7ತಿಂಗಳ ಹಿಂದೆಷ್ಟೇ ನಡೆದಿದ್ದು, ವೈಶಾಲಿ ಅವರು ಶನಿವಾರ ಸಂಜೆ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ತಾಯಿ ನೀಡಿದ ದೂರಿನಂತೆ ಸಂಪ್ಯಾ ಠಾಣೆಯ ಪೊಲೀಸರು ಪ್ರಕರಣ ದಾಖಿಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!