August 13, 2026

ಉಪ್ಪಿನಂಗಡಿ: ಕೈ ಇಲ್ಲದ ವ್ಯಕ್ತಿಗೆ ಊಟವನ್ನು ಬಾಯಿಗೆ ಕೊಟ್ಟ ಕ್ಯಾಂಟೀನ್ ಸಿಬ್ಬಂದಿ – ಪೋಟೊ ವೈರಲ್, ವ್ಯಾಪಕ ಪ್ರಶಂಸೆ

0
IMG-20221105-WA0019.jpg

ಉಪ್ಪಿನಂಗಡಿ: ಕೈ ಇಲ್ಲದ ವ್ಯಕ್ತಿಯೋರ್ವವರ ಹಸಿವು ನೀಗಿಸಲು ಕ್ಯಾಂಟಿನ್‌ನ ಸಿಬ್ಬಂದಿಯೊಬ್ಬರು ಊಟವನ್ನು ಬಾಯಿಗೆ ಕೊಡುವ ಪೊಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಪ್ಪಿನಂಗಡಿಯ ಕ್ಯಾಂಟಿನ್ ನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ಲಾ ಎಂಬುವವರು ಎರಡೂ ಕೈಗಳಿಲ್ಲದ ವ್ಯಕ್ತಿಯೋರ್ವರಿಗೆ ಊಟ ಮಾಡಿಸಿದ್ದಾರೆ.

“ಅವರಿಗೆ ಹಸಿವಾಗಿತ್ತು. ತಿನ್ನಲು ಕೈಗಳಿಲ್ಲ. ಮುನ್ನಿ ಚಪ್ಪಲ್ಸ್ ಪಕ್ಕದ ಎಂ.ಎಚ್ ಕ್ಯಾಂಟಿನ್ ನಲ್ಲಿ ಈ ದೃಶ್ಯ ಕಂಡು ಸೆರೆ ಹಿಡಿದೆ. ತಿನ್ನಿಸುವವರಾರೋ,? ತಿನ್ನುವವರಾರೋ.?
ಎಲ್ಲಿಯ ಋಣಾನುಬಂಧವೋ? ಕ್ಯಾಂಟಿನ್ ನಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್ಲಾ ಎಂಬುವವರು ಎರಡೂ ಕೈಗಳಿಲ್ಲದ ಮನುಷ್ಯನೊಬ್ಬನ ಹಸಿವು ನೀಗಿಸಿದರು. ಉಣ್ಣುವ ಬಟ್ಟಲನ್ನೇ ಕಸಿಯುವ, ಉಣ್ಣುವ ಕೈಗಳನ್ನೇ ತುಂಡರಿಸುವ ಕಾಲದಲ್ಲಿ ಇದು ಇಷ್ಟವಾಯಿತು” ಎಂದು ಬರಹಗಾರ, ಕವಿ ಜಲೀಲ್ ಮುಕ್ರಿಯವರು ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!