ಆಮ್ಲೆಟ್ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು!
ತೆಲಂಗಾಣ: ಜನಗಾಮ ಜಿಲ್ಲೆಯ ಬಚನ್ನಪೇಟೆಯಲ್ಲಿ ಬಾರ್‌ನಲ್ಲಿ ಕುಡಿಯುವ ಜೊತೆಗೆ ಸೇವಿಸಿದ ಆಮ್ಲೆಟ್ ಗಂಟಲಲ್ಲಿ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಚ್ಚನ್ನಪೇಟೆಯ ಇದಲಕಂಠಿ ಭೂಪಾಲ್ ರೆಡ್ಡಿ (38) ಮೃತ ವ್ಯಕ್ತಿ.
ಈತ ಕುಡಿಯಲೆಂದು ಬಾರ್‌ಗೆ ಹೋಗಿದ್ದು, ಮದ್ಯ ಕುಡಿಯುವಾಗ ಆಮ್ಲೆಟ್‌ನ್ನೂ ಸೇವಿಸಿದ್ದಾನೆ. ಈ ವೇಳೆ ಆಮ್ಲೆಟ್ ಗಂಟಲಿನಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಾಹಿತಿ ತಿಳಿದು ಮೃತ ಸ್ಥಳಕ್ಕಾಗಮಿಸಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.





