February 3, 2026

ಮಗುವನ್ನು ಎತ್ತಿಕೊಂಡೇ ಭಾಷಣ ಮಾಡಿದ ಮಹಿಳಾ ಜಿಲ್ಲಾಧಿಕಾರಿ: ಸಾಮಾಜಿಕ ತಾಣದಲ್ಲಿ ಪ್ರಶಂಸೆ, ಟೀಕೆ

0
IMG-20221104-WA0016.jpg

ತಿರುವನಂತಪುರಂ: ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಮೂರೂವರೆ ವರ್ಷದ ತಮ್ಮ ಮಗುವನ್ನು ಎತ್ತಿಕೊಂಡು ವೇದಿಕೆಯಲ್ಲಿ ಭಾಷಣ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ದಿವ್ಯ ಎಸ್. ಅಯ್ಯರ್ ಅವರು ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸಿದ್ದು, ಈ ವೇಳೆ ಮೂರೂವರೆ ವರ್ಷದ ತಮ್ಮ ಮಗುವನ್ನೂ ಕರೆ ತಂದಿದ್ದರು. ವೇದಿಕೆಯಲ್ಲಿ ಮಡಿಲಲ್ಲೇ ಮಗುವನ್ನು ಕುಳ್ಳಿರಿಸಿದ ಅಧಿಕಾರಿ ಬಳಿಕ ಭಾಷಣದ ಸರದಿ ಬಂದಾಗ ಮಗುವನ್ನು ಎತ್ತಿಕೊಂಡೇ ಭಾಷಣ ಮಾಡಿದ್ದಾರೆ.

ಇನ್ನು ಈ ವೀಡಿಯೋವನ್ನು ಕಾರ್ಯಕ್ರಮದ ಆಯೋಜಕ ವಿಧಾನಸಭೆಯ ಉಪಾಧ್ಯಕ್ಷ ಚಿಟ್ಟಾಯಂ ಗೋಪಕ್‍ಕುಮಾರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, 6ನೇ ಚಲನಚಿತ್ರೋತ್ಸವದಲ್ಲಿ ಜಿಲ್ಲಾಧಿಕಾರಿ ಮತ್ತು ಅವರ ಪುತ್ರ ಪಾಲ್ಗೊಂಡಿದ್ದರು ಎಂಬ ಅಡಿಬರಹದಲ್ಲಿ ಅವರು ಪೋಸ್ಟ್ ಪ್ರಕಟಿಸಿದ್ದರು.

ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ಕೆಲವರು ಜಿಲ್ಲಾಧಿಕಾರಿ ಪರ ಕಾಮೆಂಟ್ ಮಾಡಿದ್ದರೆ, ಹಲವರು ಇದು ಸರಿಯಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!