ಮದುವೆಯಾಗಲು ನಿರಾಕರಣೆ:
ಯುವತಿಗೆ 18 ಬಾರಿ ಚೂರಿ ಇರಿತ
ಹೈದರಾಬಾದ್: ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಭಗ್ನ ಪ್ರೇಮಿ ಯುವತಿಗೆ 18 ಬಾರಿ ಇರಿದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆತ ನನ್ನ ಗೆಳೆಯ ಎಂದು ಚೂರಿ ಇರಿತಕ್ಕೊಳಗಾಗಿರುವ ಯುವತಿ ತಿಳಿಸಿದ್ದು, ಇತ್ತೀಚೆಗಷ್ಟೇ ಆಕೆ ಆತನನ್ನು ವಿವಾಹವಾಗಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ. ಈ ವ್ಯಕ್ತಿಯನ್ನು ಬಸವರಾಜ ಎಂದು ಗುರುತಿಸಲಾಗಿದೆ.
ಎರಡು ತಿಂಗಳ ಹಿಂದೆ ಯುವತಿಗೆ ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿತ್ತು. ಯುವತಿ ಮತ್ತು ಯುವಕ ವಿಕಾರಾಬಾದ್ ಜಿಲ್ಲೆಯ ದೌಲತ್ ಬಾದ್ ನ ನಿವಾಸಿಗಳಾಗಿದ್ದು, ಇಬ್ಬರ ನಡುವೆ ಸಂಬಂಧ ಇದ್ದಿರುವುದಾಗಿ ವರದಿ ಹೇಳಿದೆ.





