ಚರಿತ್ರ ಪ್ರಸಿದ್ಧ ಉಳ್ಳಾಲ ಉರೂಸ್ ಸಮಾರಂಭಕ್ಕೆ ದೀಪಾಲಂಕಾರದ ಅನುಮತಿ ಪ್ರಪ್ರಥಮ ಬಾರಿಗೆ ಸುಳ್ಯದ ಎಚ್ ಎಲ್ ಎಸ್ ಸಂಸ್ಥೆಗೆ
ಉಳ್ಳಾಲ: ಪ್ರತಿ 5 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಹೊಂದಿರುವ ಉಳ್ಳಾಲ ಹಜ್ರತ್ ಸೈಯದ್ ಮದನಿ ರವರ ಉರುಸ್ ಸಮಾರಂಭ ಡಿಸೆಂಬರ್ 23ರಿಂದ ಜನವರಿ 16ರ ವರೆಗೆ ನಡೆಯಲಿದೆ.
ಈ ಬಾರಿ ಉಳ್ಳಾಲ ದರ್ಗಾ ಮತ್ತು ಪರಿಸರದ ದೀಪಾಲಂಕಾರದ ಅನುಮತಿ ಸುಳ್ಯದಲ್ಲಿ ಕಾರ್ಯಚರಿಸುತ್ತಿರುವ ಹಸ್ಸನ್ ಹಳೆಗೇಟು ರವರ ಮಾಲಕತ್ವದ ಎಚ್ ಎಲ್ ಎಸ್ ಸಂಸ್ಥೆಗೆ ಪ್ರಪ್ರಥಮ ಬಾರಿಗೆ ಲಭಿಸಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಈ ಸಂಸ್ಥೆಯು ಕಳೆದ 38 ವರ್ಷಗಳಿಂದ ಸುಳ್ಯ, ಪುತ್ತೂರು , ಬಂಟ್ವಾಳ, ಮಡಿಕೇರಿ, ಕೇರಳ ಭಾಗದ ಕಾಸರಗೋಡು ಮುಂತಾದ ಕಡೆಗಳಲ್ಲಿ ಊರೂಸ್ ಸಮಾರಂಭಗಳಿಗೆ, ಹಾಗೂ ಜಾತ್ರಾ ಕಾರ್ಯಕ್ರಮಗಳಿಗೆ ದೀಪಾಲಂಕಾರ ಮತ್ತು ಧ್ವನಿ ವ್ಯವಸ್ಥೆಗಳನ್ನು ನೀಡಿ ಯಶಸ್ವಿಯನ್ನು ಕಂಡ ಸಂಸ್ಥೆಯಾಗಿದೆ.
ಇದೀಗ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾದ ಉಳ್ಳಾಲ ಉರೂಸ್ ಸಮಾರಂಭಕ್ಕೆ ಅನುಮತಿ ಲಭಿಸಿದ್ದು ಸಂತೋಷ ತಂದಿದೆ ಹಾಗೂ ಈ ಬಾರಿ ಉಳ್ಳಾಲದಲ್ಲಿ ಸುಮಾರು 400ಕ್ಕೂ ಹೆಚ್ಚು ಫೋಕಸ್ ಬಲ್ಬುಗಳು, 1500ಕ್ಕೂ ಹೆಚ್ಚು ಟ್ಯೂಬ್ ಲೈಟ್ ಗಳು, 5 ಲಕ್ಷಕ್ಕೂ ಮಿಕ್ಕಿ ಕಲರ್ ಬಲ್ಬುಗಳ ವ್ಯವಸ್ಥೆಗಳಿಂದ ದರ್ಗಾ ಮತ್ತು ಮಸ್ಜಿದ್ ಪರಿಸರವನ್ನು ಅಲಂಕರಿಸಲಾಗುವುದು ಎಂದು ಮಾಲಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.