March 20, 2026

ಆಡುತ್ತಿದ್ದಾಗ ಲಿಫ್ಟ್‌ಗೆ ಸಿಲುಕಿ ಬಾಲಕಿ ಸಾವು

0
image_editor_output_image-1348605496-1667374936394.jpg

ಮುಂಬೈ: ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಲಿಫ್ಟ್‌ಗೆ ಸಿಲುಕಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮುಂಬೈನ ಮನ್‌ಖುರ್ದ್ ಪ್ರದೇಶದ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ರೇಷ್ಮಾ ಖಾರವಿ ಎಂದು ಗುರುತಿಸಲಾಗಿದೆ.

ಸ್ನೇಹಿತರು ಲಿಫ್ಟ್‌ ಒಳಗೆ ಅಡಗಿ ಕುಳಿತಿರಬಹುದೆಂದು ಲಿಫ್ಟ್‌ನಲ್ಲಿದ್ದ ಚಿಕ್ಕ ಕಿಟಕಿಯ ಒಳಗೆ ತನ್ನ ತಲೆ ತೂರಿಸಿ ನೋಡುವಾಗ ಮೇಲಿಂದ ಲಿಫ್ಟ್‌ ಬಂದಿದ್ದು, ಈ ವೇಳೆ ಲಿಫ್ಟ್‌ ರೇಷ್ಮಾಳ ತಲೆಗೆ ಬಡಿದು ಸಾವನ್ನಪ್ಪಿದ್ದಾಳೆ.

ಇನ್ನು ಅಪಘಾತ ತಪ್ಪಿಸಲು ಹೌಸಿಂಗ್ ಸೊಸೈಟಿ ಅಧಿಕಾರಿಗಳು ಕಿಟಕಿಗೆ ಗಾಜು ಅಳವಡಿಸಬೇಕು ಎಂದು ಮೃತರ ತಂದೆ ರವಿ ಖಾರವಿ ಆಗ್ರಹಿಸಿದ್ದಾರೆ.

ಈ ಸಂಬಂಧ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಹೌಸಿಂಗ್ ಸೊಸೈಟಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೋಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!