March 20, 2026

ವೀರಭದ್ರೇಶ್ವರ ಸ್ವಾಮಿ ದೇವಾಲಯದ ರಥ ಪಲ್ಟಿ: ಅರ್ಚಕ‌ ಸಹಿತ ಹಲವರು ಅಪಾಯದಿಂದ ಪಾರು

0
image_editor_output_image-2112927416-1667290751381.jpg

ಚಾಮರಾಜನಗರ: ತಾಲ್ಲೂಕಿನ ಅಮಚವಾಡಿ-ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ನಡೆದ ರಥೋತ್ಸವ ಸಂದರ್ಭದಲ್ಲಿ ರಥ ಪಲ್ಟಿಯಾಗಿದೆ. ಅದೃಷ್ಟವಶಾತ್ ಸಾವು- ನೋವು ಸಂಭವಿಸಿಲ್ಲ.

ಆರು ಶತಮಾನಗಳಿಂತಲೂ ಹಳೆಯದಾದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಎರಡು ವರ್ಷಗಳ ಬಳಿಕ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಆರಂಭವಾಯಿತು.

ದೇವಾಲಯದ ಆವರಣದಲ್ಲಿ ಒಂದು ಸುತ್ತು ರಥ ಎಳೆಯಬೇಕಿತ್ತು. ತೇರು ಅರ್ಧದವರೆಗೆ ತಲುಪಿದಾಗ ಅದರ ಚಕ್ರದ ಪಟ್ಟಿ (ದೂರಿ) ತುಂಡಾಯಿತು. ಈ ಸಂದರ್ಭದಲ್ಲಿ ತೇರು ನಿಧಾನವಾಗಿ ಕೆಳಕ್ಕೆ ವಾಲಿತು. ಈ ಸಂದರ್ಭದಲ್ಲಿ ಅರ್ಚಕರು ಸೇರಿ ನಾಲ್ವರು ಸಿಕ್ಕಿಹಾಕಿಕೊಂಡರು.

Leave a Reply

Your email address will not be published. Required fields are marked *

error: Content is protected !!