ಗುಜರಾತ್ ಸೇತುವೆ ದುರಂತ – ನಾಳೆ ಮೊರ್ಬಿಗೆ ಪ್ರಧಾನಿ ಮೋದಿ ಭೇಟಿ
ಅಹಮದಾಬಾದ್: ಬ್ರಿಟಿಷರ ಕಾಲದ ಮೊರ್ಬಿ ತೂಗು ಸೇತುವೆ ಭಾನುವಾರ ಸಂಜೆ ಕುಸಿದು ಕನಿಷ್ಠ 141 ಜನರು ಸಾವನ್ನಪ್ಪಿದ್ದು, ಗುಜರಾತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮೊರ್ಬಿಗೆ ಭೇಟಿ ನೀಡಲಿದ್ದಾರೆ.
ತೂಗು ಸೇತುವೆಯ ಮೇಲೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 500 ಜನರು ಇದ್ದಾಗಲೇ ಸೇತುವೆ ಕುಸಿತವಾಗಿದ್ದು, 141 ಜನರು ಸಾವನ್ನಪ್ಪಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಮೋದಿ, “ನಾನು ಏಕ್ತಾ ನಗರದಲ್ಲಿದ್ದೇನೆ, ಆದರೆ ನನ್ನ ಮನಸ್ಸು ಮೊರ್ಬಿ ಸಂತ್ರಸ್ತರ ಜೊತೆಗಿದೆ. ನನ್ನ ಜೀವನದಲ್ಲಿ ಇಂತಹ ನೋವನ್ನು ಯಾವತ್ತು ಅನುಭವಿಸಿಲ್ಲ. ಒಂದು ಕಡೆ, ನೋವಿನಿಂದ ಕೂಡಿದ ಹೃದಯವಿದೆ, ಇನ್ನೊಂದು ಕಡೆ, ಕರ್ತವ್ಯದ ಹಾದಿ ಎಂದಿದ್ದಾರೆ.
ಇನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ಗುಜರಾತ್‌ನ ಕೆವಾಡಿಯಾದಲ್ಲಿರುವ ಏಕತಾ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ವೇಳೆ ಮೊರ್ಬಿ ಘಟನೆಯ ಬಗ್ಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.