ಕೋಝಿಕ್ಕೋಡ್ ಬೀಚ್‌ನಲ್ಲಿ ಹಿಂದಕ್ಕೆ ಸರಿದ ನೀರು – ಭಯಭೀತರಾದ ಸ್ಥಳೀಯರು
ಕೋಝಿಕ್ಕೋಡ್: ಕೋಝಿಕ್ಕೋಡ್‌ನ ನೈನಂವಾಲಪ್ಪು ಬೀಚ್‌ನಲ್ಲಿ ಶನಿವಾರ ಸಂಜೆ ಸಮುದ್ರದ ನೀರು ಇಳಿಮುಖವಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಆದರೆ ಸದ್ಯಕ್ಕೆ ಯಾವುದೇ ಸುನಾಮಿ ಎಚ್ಚರಿಕೆ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೀಚ್‌ನಲ್ಲಿ ಶನಿವಾರ ಸಂಜೆ ಹಲವು ಗಂಟೆಗಳ ಕಾಲ ಸಮುದ್ರ 50 ಮೀಟರ್‌ವರೆಗೆ ತಗ್ಗಿದ್ದು, ಇದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಬಳಿಕ ಕೆಲ ಗಂಟೆಗಳ ಬಳಿಕ ಸಮುದ್ರ ಸಹಜ ಸ್ಥಿತಿಗೆ ಮರಳಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ನರಸಿಂಹುಗರ್ ಟಿ ಎಲ್ ರೆಡ್ಡಿ, ಸುನಾಮಿ ಭೀತಿ ಇಲ್ಲ, ಆತಂಕಪಡುವ ಅಗತ್ಯವಿಲ್ಲ. ಹವಾಮಾನ ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ವಿದ್ಯಮಾನವು ಸ್ಥಳೀಯವಾಗಿ ಮಾತ್ರ ದಾಖಲಾದ ಬೆಳವಣಿಗೆ ಎಂದು ಸ್ಪಷ್ಟಪಡಿರುವುದಾಗಿ ತಿಳಿಸಿದರು.
ಇನ್ನು ಈ ಘಟನೆಗೆ ಯಾವುದೇ ಕಾರಣವಿಲ್ಲ. ಆದರೂ ಜಲಾವೃತ ಪ್ರದೇಶದಲ್ಲಿರುವ ಜನರು ಈ ಸಮಯದಲ್ಲಿ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.