December 3, 2024

ವಿಟ್ಲ: ಮಿತ್ತೂರು ಮನೆಯಲ್ಲಿ ಮಲಗಿದ್ದ ವೇಳೆ 107 ಗ್ರಾಂ ಚಿನ್ನಾಭರಣ ದೋಚಿದ ಪ್ರಕರಣ: ಕೇರಳ ರಾಜ್ಯದ ಖತರ್ನಾಕ್ ಖದೀಮನ ಬಂಧನ: ವಿಟ್ಲ ಪೊಲೀಸರ ಕಾರ್ಯಾಚರಣೆ

0

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ಮನೆಯಲ್ಲಿ ಮಲಗಿದ್ದ ವೇಳೆ 107 ಗ್ರಾಂ ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಖತರ್ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕಣ್ಣೂರಿನ ಮಹಮ್ಮದ್‌ ಕೆ ಯು(42) ಎಂದು ಗುರುತಿಸಲಾಗಿದೆ.

ಇನ್ನು ಆರೋಪಿಯನ್ನು ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೂಡಿನಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ಕಳವು ಮಾಲನ್ನು ಕಾಸರಗೂಡಿನ ಜುವ್ಯೆಲರಿ ಅಂಗಡಿಯಿಂದ ಸುಮಾರು 80.10 ಗ್ರಾಂ ನಷ್ಟು ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಅಂದಾಜು ಮೌಲ್ಯ 3,71,600/-ರೂಪಾಯಿ ಆಗಬಹುದು.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಘಟನೆಯ ವಿವರ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಉಮ್ಮರ್‌ ಎಂಬವರ ಮನೆಯಲ್ಲಿ ಸಂಬಂದಿಕರು ಹಾಗೂ ಮನೆಯವರು ಮನೆಯಲ್ಲಿ ಇರುವಾಗಲೇ ಮಾರ್ಚ್ 9 ರಂದು ರಾತ್ರಿ ಸಮಯ 11.0 ಗಂಟೆಯಿಂದ ಬೆಳಗ್ಗಿನ ಜಾವ 04ಗಂಟೆಯ ಸಮಯ ಮದ್ಯೆ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳರು ಕಳ್ಳತನ ಮಾಡಿದ್ದು ಕಳವಾಗಿದ್ದ ಅಂದಾಜು ಮೌಲ್ಯ 4,28,000 ರೂಪಾಯಿ ಎಂಬಿತ್ಯಾದಿಯಾಗಿ ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳ್ಳತನ ಪ್ರಕರಣ ದಾಖಲಾದ ಕೂಡಲೇ ಪೊಲೀಸ್ ಅಧೀಕ್ಷಕರು ಋಷಿಕೇಶ್ ಸೋನವಣೆ ಐಪಿಎಸ್ ದ.ಕ ಜಿಲ್ಲೆ, ಮಾನ್ಯ ಹೆಚ್ಚುವರಿ ಜಿಲಾ ಪೊಲೀಸ್‌ ಅಧೀಕ್ಷಕರು ಕುಮಾರ ಚಂದ್ರ ರವರು ಹಾಗೂ ಪ್ರತಾಪಸಿಂಗ್‌ ತೋರಟ್‌ ಡಿವೈಎಸ್‌ಪಿ ಬಂಟ್ವಾಳ ಉಪವಿಭಾರವರ ಮಾರ್ಗದರ್ಶನದಲ್ಲಿ ವಿಟ್ಲದ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ನಾಗರಾಜ್ ಹೆಚ್ ಇ ಇವರ ನೇತೃತ್ವದಲ್ಲಿ ಠಾಣಾ ಪಿಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಪಿಎಸ್ ಐ (ಕಾಮತ್ತುಸು), ರುಕ್ಮಾ ನಾಯ್ಕ್‌ ಪಿಎಸ್‌ಐ (ತನಿಖೆ-1) ಹಾಗೂ ಸಿಬ್ಬಂದಿಗಳು ಪತ್ತೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!