November 21, 2024

ಮಾನಸಿಕ ಆರೋಗ್ಯ ಚಿಕಿತ್ಸೆ ವೇಳೆ ಪ್ರೀತಿ – ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

0

ಚೆನ್ನೈ: ಮಾನಸಿಕ ಆರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮತ್ತು ಯುವತಿ ಚಿಕಿತ್ಸಾ ಕೇಂದ್ರದಲ್ಲೇ ಪ್ರೀತಿಯಲ್ಲಿ ಬಿದ್ದು, ಇದೀಗ ಸಪ್ತಪದಿ ತುಳಿದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಐಎಂಎಚ್‌ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚೆನ್ನೈ ಮೂಲದ 42 ವರ್ಷದ ಮಹೇಂದ್ರನ್ ಮತ್ತು ವೆಲ್ಲೂರಿನ 36 ವರ್ಷದ ದೀಪಾ ಅವರು ಎರಡು ವರ್ಷಗಳ ಹಿಂದೆ ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇದೀಗ ತಮ್ಮ ಪ್ರೀತಿಯಿಮ್ದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಕೌಟುಂಬಿಕ ಕಲಹದಿಂದ ಖಿನ್ನತೆಗೊಳಗಾಗಿದ್ದ ಮಹೇಂದ್ರನ್ ಚಿಕಿತ್ಸೆಗೆ ಈ ಕೇಂದ್ರಕ್ಕೆ ಬಂದಿದ್ದರು. ಅದೇ ವೇಳೆ ತಂದೆಯ ಸಾವಿನಿಂದ ಕಂಗಾಲಾದ ದೀಪಾ ಅವರೂ ಮಾನಸಿಕವಾಗಿ ಕುಗ್ಗಿ ಹೋಗಿ ಮಾನಸಿಕ ಆರೋಗ್ಯದ ಚಿಕಿತ್ಸೆಗಾಗಿ ಇದೇ ಕೇಂದ್ರಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!