October 7, 2026

ಸುಳ್ಯ: ಚರಂಡಿಗೆ ಬಿದ್ದ ಮಗು-ಸ್ಥಳೀಯರಿಂದ ರಕ್ಷಣೆ

0
image_editor_output_image1174031285-1791375310576

ಸುಳ್ಯ: ಪಟ್ಟಣದ ಶ್ರೀರಾಮಪೇಟೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ಎದುರು ರಸ್ತೆ ಬದಿ ಜೆಸಿಬಿ ಮೂಲಕ ಕುಡಿಯುವ ನೀರಿನ ಪೈಪ್ ಕಾಮಗಾರಿ ನಡೆಯುತ್ತಿದ್ದು, ಫುಟ್‌ಪಾತ್‌ನ ಚರಂಡಿ ಫ್ಲ್ಯಾಬ್ ತೆರವುಗೊಳಿಸಿದ್ದ ಸ್ಥಳಕ್ಕೆ ನಡೆದುಕೊಂಡು ಬರುತ್ತಿದ್ದ ಮಗು ಬಿದ್ದ ಘಟನೆ ನಡೆದಿದೆ.

ಮಗು ತನ್ನ ಮನೆಯವರೊಂದಿಗೆ ನಡೆದುಕೊಂಡು ಬರುತ್ತಿದ್ದ ವೇಳೆ ಕಾಮಗಾರಿ ವೀಕ್ಷಿಸುತ್ತಾ ಮುಂದೆ ಬಂದಿದ್ದು, ಫುಟ್‌ಪಾತ್‌ನ ಸ್ಲಾಬ್ ತೆರವುಗೊಳಿಸಿದ್ದ ಚರಂಡಿಯೊಳಗೆ ಆಕಸ್ಮಿಕವಾಗಿ ಬಿದ್ದಿದೆ.

 

ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಮಗು ಯಾವುದೇ ಅಪಾಯವಿಲ್ಲದೆ ಪಾರಾಗಿದೆ.

ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರಿಗೆ ಅಪಾಯವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!