ತಾಯಿ, ಅಪ್ರಾಪ್ತ ಮಗಳ ಮೃತದೇಹ ಬಾವಿಯಲ್ಲಿ ಪತ್ತೆ, ತಂದೆಯ ಬಂಧನ
ರಾಂಚಿ: ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ತಾಯಿ ಹಾಗೂ ಅಪ್ರಾಪ್ತ ಮಗಳ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಕೆಡ್ಲಿ ಗ್ರಾಮದ ಚುಂಚನ್ ದೇವಿ (35), ಹಾಗೂ ಆಕೆಯ ಮಗಳು ರಾಧಿಕಾ ಕುಮಾರಿ (12) ಶವವನ್ನು ಪೊಲೀಸರು ಹೊರತೆಗೆದರು. ಘಟನೆಗೂ ಮುನ್ನ ಹರಿಶ್ಚಂದ್ರ ಯಾದವ್ ಅಲಿಯಾಸ್ ಚಿಂತನ್ ತನ್ನ ಪತ್ನಿ ಚುಂಚನ್ ದೇವಿ ಜೊತೆಗೆ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಜಗಳವಾಡಿದ್ದ. ಅಷ್ಟೇ ಅಲ್ಲದೇ ಆಗಾಗ ಹರಿಶ್ಚಂದ್ರ, ಚುಂಚನ್ ದೇವಿ ಮೇಲೆ ಹಲ್ಲೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಚುಂಚನ್ ದೇವಿ ಹಾಗೂ ಆಕೆಯ ಮಗಳು ರಾಧಿಕಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.
ಘಟನೆಗೆ ಸಂಬಂಧಿಸಿ ಚುಂಚನ್ ದೇವಿ ಹಾಗೂ ರಾಧಿಕಾ ಮೃತದೇಹವನ್ನು ಹಜಾರಿಬಾಗ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಚುಂಚನ್ ದೇವಿಯ ತಂದೆ ಸಲ್ಲಿಸಿದ ಎಫ್‍ಐಆರ್ ಆಧಾರದ ಮೇಲೆ ಹರಿಶ್ಚಂದ್ರ ಯಾದವ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.





