ಮದುವೆ ಊಟದಲ್ಲಿ ರಸಗುಲ್ಲಾ ಬಡಿಸಿಲ್ಲವೆಂದು ನಡೆಯಿತು ಕೊಲೆ!
ಆಗ್ರಾದಲ್ಲಿ ಮದುವೆ ಆರತಕ್ಷತೆ ಊಟದಲ್ಲಿ ರಸಗುಲ್ಲಾ ಬಡಿಸಲಿಲ್ಲವೆಂದು ವಧು-ವರರ ಕಡೆಯ ಯುವಕರ ನಡುವೆ ಜಗಳ ನಡೆದು, ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ಮದುವೆಯಲ್ಲಿ ಊಟಕ್ಕೆ ರಸಗುಲ್ಲಾ ಬಡಿಸಲಿಲ್ಲ ಎಂಬ ವಿಚಾರವಾಗಿ ಎರಡೂ ಕಡೆಯ ಅತಿಥಿಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆ ತಾರಕಕ್ಕೇರಿ ಖಂಡೌಲಿ ಮೂಲದ 20 ವರ್ಷದ ಸನ್ನಿ ಎಂಬ ಯುವಕನೊಬ್ಬನನ್ನುಚೂರಿ ಇರಿದು ಕೊಲೆ ಮಾಡಲಾಗಿದೆ.
ಇನ್ನು ಘಟನೆ ಕುರಿ ತುಎಟ್ಮಾಡ್ಪುರದ ಎಸ್‌ಎಚ್‌ಒ ಸರ್ವೇಶ್ ಕುಮಾರ್ ಮಾಹಿತಿ ನೀಡಿದ್ದು, ಎರಡೂ ಕಡೆಯ ಯುವಕರು ಪರಸ್ಪರ ತಟ್ಟೆ, ಕುರ್ಚಿಗಳನ್ನು ಎಸೆದುಕೊಂಡಿದ್ದಾರೆ.

ಸನ್ನಿ ಎಂಬಾತನಿಗೆ ಚೂರಿಯಿಂದ ಇರಿಯಲಾಗಿದ್ದು, ಕೂಡಲೇ ಎಂಬತಾನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.





