ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಲು ಕಾರಣವಾಗಬಹುದು- ಮೋದಿ
ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಲು ಕಾರಣವಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸುದ್ದಿ, ಒಂದು ಸಣ್ಣ ಸುಳ್ಳು ಸುದ್ದಿ ಇಡೀ ದೇಶದಲ್ಲಿ ಬಿರುಗಾಳಿ ಎಬ್ಬಿಸಲು ಕಾರಣವಾಗಬಹುದು. ವೀಡಿಯೋಗಳನ್ನು ಫಾರ್ವರ್ಡ್ ಮಾಡುವ ಮೊದಲು ಸತ್ಯಾಸತ್ಯತೆ ಅರಿತುಕೊಳ್ಳಬೇಕು ಎಂದರು.

ಇನ್ನು ಯಾವುದೇ ಸುದ್ದಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆ ಪರಾಮರ್ಶಿಸಬೇಕು. ಅಲ್ಲದೆ ಅದನ್ನು ಬೇರೆಯವರಿಗೆ ಕಳುಹಿಸಬಹುದೇ ಎಂಬ ಬಗ್ಗೆ ಯೋಚಿಸಬೇಕು. ಯಾವುದೇ ಸುದ್ದಿಗಳನ್ನು ಸತ್ಯವೆಂದು ನಂಬುವ ಮೊದಲು ಯೋಚಿಸುವಂತೆ ಜನರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.





