ಮಂಗಳೂರು: ಸುರತ್ಕಲ್ ಟೋಲ್‍ಗೇಟ್ ವಿರುದ್ಧ ಮತ್ತೆ ಸಮಾನ ಮನಸ್ಕ ಸಂಘಟನೆಯಿಂದ ಹಗಲು-ರಾತ್ರಿ ಹೋರಾಟ
ಮಂಗಳೂರು, ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕ ಸಂಘಟನೆಗಳು ಮತ್ತೆ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ಇಂದು ಆರಂಭಗೊಂಡಿದೆ.

ಭರವಸೆಗಳು ಬೇಡ, ಟೋಲ್ ನಿಲ್ಲಿಸಿ ಎಂದು ಟೋಲ್ ಗೇಟ್ ಪರಿಸರದಲ್ಲಿ ಧರಣಿ ಕುಳಿತು ಸಮಾನಮನಸ್ಕ ಸಂಘಟನೆಗಳು ಒತ್ತಾಯಿಸುತ್ತಿದ್ದು, ಟೋಲ್ ಗೇಟ್ ತೆರವು ಆಗುವವರೆಗೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವರಾದ ರಮನಾಥ ರೈ, ಕೆ.ಅಭಯಚಂದ್ರ ಜೈನ್, ಹೋರಾಟಗಾರರಾದ ವಕೀಲ ದಿನೇಶ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್, ಮಾಜಿ ಶಾಸಕ ಮೊಯ್ದಿನ್ ಬಾವ, ರಾಘವೇಂದ್ರ ರಾವ್ ಸೇರಿದಂತೆ ಮತ್ತಿತರರು ಧರಣಿಗೆ ಬೆಂಬಲ ನೀಡಿದ್ದಾರೆ.





