ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ: ಸ್ವಾಮೀಜಿಯದ್ದು ಎನ್ನಲಾದ ವೀಡಿಯೋ ವೈರಲ್
ರಾಮನಗರ: ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆಗೆ ಟ್ವಿಸ್ಟ್ ದೊರೆತ್ತಿದ್ದು, ಸ್ವಾಮೀಜಿ, ಮಹಿಳೆಯೊಂದಿಗೆ ವೀಡಿಯೋ ಕಾಲ್‍ನಲ್ಲಿ ಮಾತನಾಡುತ್ತಿದ್ದ ಎನ್ನಲಾದ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಂಡೆಮಠದ ಶ್ರೀಗಳ ಸಾವಿನ ಸುತ್ತ ದಿನೇ ದಿನೇ ಹೊಸ ಸ್ಫೋಟಕ ವಿಷಯಗಳು ಬಯಲಾಗುತ್ತಿದೆ. ಅಷ್ಟೇ ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅವರು 2 ಪುಟಗಳ ಡೆತ್ ನೋಟ್ ಕೂಡಾ ಬರೆದಿದ್ದು, ಅದರಲ್ಲೂ ಹಲವರ ಹೆಸರನ್ನು ಬರೆದಿದ್ದು.
ಆದರೆ ಪ್ರಕರಣಕ್ಕೆ ಸಂಬಂಧಿಸಿ ಕುದೂರು ಪೊಲೀಸರು ಅನಾಮಧೇಯನ ಹೆಸರಿನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.
ಅದಾದ ಬಳಿಕ ಸ್ವಾಮೀಜಿ ಸಾವಿಗೆ ಬೆದರಿಕೆಯೇ ಕಾರಣನಾ ಎಂಬ ಅನುಮಾನಗಳು ಹೆಚ್ಚಾಗಿತ್ತು. ಏಕೆಂದರೆ ಸ್ವಾಮೀಜಿ ನೇಣಿಗೆ ಶರಣಾಗುವ ಮುನ್ನ ಶ್ರೀಗಳನ್ನು ಇಬ್ಬರು ವ್ಯಕ್ತಿಗಳು ಭೇಟಿ ಆಗಿದ್ದ ವಿಚಾರ ಬೆಳಕಿಗೆ ಬಂದಿತ್ತು.
ಆದರೆ ಆ ಇಬ್ಬರು ವ್ಯಕ್ತಿಗಳು ಯಾರು ಎಂಬುದು ಇನ್ನೂ ಬಯಲಾಗಿಲ್ಲ. ಆದರೆ ದಿನ ಸುಮಾರು ಅರ್ಧಗಂಟೆಗೂ ಹೆಚ್ವು ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆದಿತ್ತು. ಅವರಿಬ್ಬರ ಭೇಟಿ ಬಳಿಕ ಶ್ರೀಗಳು ವಿಚಲಿತರಾಗಿದ್ರಾ? ಶ್ರೀಗಳನ್ನು ಭೇಟಿ ಮಾಡಿದ್ದಾ ಆ ಇಬ್ಬರು ವ್ಯಕ್ತಿಗಳು ಯಾರು ಎಂಬ ಪ್ರಶ್ನೆಗಳು ಮೂಡಿತ್ತು.




