February 4, 2026

ಮಂಗಳೂರು: ದೀಪಾವಳಿಯ ರಂಗೋಲಿಯನ್ನು ವಿರೂಪಗೊಳಿಸಿದ ಯುವಕರು

0
image_editor_output_image334149786-1666781131249.jpg

ಮಂಗಳೂರು: ದೀಪಾವಳಿ ಹಬ್ಬಕೆ ಬಿಡಿಸಿದ ರಂಗೋಲಿಯನ್ನು ಕುಡಿದ ಮತ್ತಿನಲ್ಲಿ ಕೆಲ ಯುವಕರು ವಿರೂಪಗೊಳಿಸಿ ದುರ್ವರ್ತನೆ ತೋರಿದ ಘಟನೆ ನಗರದ ಬಿಜೈಯಲ್ಲಿ ನಡೆದಿದೆ.

ಅಪಾರ್ಟ್‌ ಮೆಂಟ್‌ ವೊಂದರಲ್ಲಿ ದೀಪಾವಳಿ ಹಬ್ಬಕ್ಕೆ ದೀಪಾವಳಿ ಬಿಡಿಸಿ, ಹಬ್ಬದ ಶುಭಾಶಯವನ್ನು ರಂಗೋಲಿಯಲ್ಲಿ ಬರೆದಿದ್ದಾರೆ. ಈ ದೀಪಾವಳಿ ರಂಗೋಲಿಯನ್ನು ಕೇರಳ ಮೂಲದವರೆನ್ನಲಾದ ಕೆಲವು ವಿದ್ಯಾರ್ಥಿಗಳು ವಿರೂಪಗೊಳಿಸಿದ್ದಾರೆ.

ಕೈಯಲ್ಲಿ ಮಧ್ಯದ ಬಾಟಲಿಯನ್ನು ಹಿಡಿದುಕೊಂಡಿದ್ದಾನೆ, ಮತ್ತೊಬ್ಬ ರಂಗೋಲಿಯನ್ನು ಮೆಟ್ಟಿ, ಅದನ್ನು ವಿರೂಪಗೊಳಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಶಾಸಕ ವೇದವ್ಯಾಸ್‌ ಕಾಮತ್‌ ಫೇಸ್‌ ಬುಕ್‌ ನಲ್ಲಿ ಈ ವಿಡಿಯೋ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿ, ಪೊಲೀಸರ ಕ್ರಮಕ್ಕೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!