July 3, 2026

ಪಟಾಕಿ ಸಿಡಿಸಬೇಡಿ ಎಂದ ಯುವಕ: ಚಾಕುವಿನಿಂದ ಇರಿದು ಯುವಕನ ಹತ್ಯೆ

0
image_editor_output_image-2066925215-1666675546138.jpg

ಮುಂಬೈ: ಮುಂಬೈನ ಶಿವಾಜಿ ನಗರದ ಪಾರೇಖ್ ಕಾಂಪೌಂಡ್ ಬಳಿ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದನ್ನು ವಿರೋಧಿಸಿದ ಯುವಕನನ್ನು ಮೂವರು ಅಪ್ರಾಪ್ತ ಬಾಲಕರು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ.

ಮೃತಪಟ್ಟ ಯುವಕನನ್ನು ಸುನಿಲ್ ನಾಯ್ಡು(21) ಎಂದು ಗುರುತಿಸಲಾಗಿದೆ.

ಇನ್ನು ಆರೋಪಿಗಳಲ್ಲಿ 14 ಮತ್ತು 15 ವರ್ಷದ ಇಬ್ಬರನ್ನು ಬಂಧಿಸಲಾಗಿದ್ದು, 12 ವರ್ಷದ ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎನ್ನಲಾಗಿದೆ.

ತೆರೆದ ಮೈದಾನದಲ್ಲಿ 12 ವರ್ಷದ ಬಾಲಕ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುತ್ತಿದ್ದಾಗ, ಸುನಿಲ್ ಅದನ್ನು ವಿರೋಧಿಸಿದ್ದ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದಾದ ಕೆಲವೇ ಹೊತ್ತಿಗೆ ಈ ಬಾಲಕ ತನ್ನ 5 ವರ್ಷದ ಸಹೋದರ ಮತ್ತು 14 ವರ್ಷದ ಸ್ನೇಹಿತನೊಂದಿಗೆ ಸೇರಿಕೊಂಡರು ಯುವಕನನ್ನು ಥಳಿಸಿದ್ದಾರೆ. ಈ ವೇಳೆ 15 ವರ್ಷದ ಬಾಲಕ ಸುನಿಲ್ ನಾಯ್ಡುಗೆ ಚಾಕುವಿನಿಂದ ಇರಿದಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!