March 18, 2026

ನಿರ್ಲಕ್ಷತನದಿಂದ ಕಾರು ಚಲಾಯಿಸಿ ಸ್ಕೂಟರ್ ಗೆ ಢಿಕ್ಕಿ: ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

0
Screenshot_2022-10-25-11-05-36-63_680d03679600f7af0b4c700c6b270fe7.jpg

ವಿಟ್ಲ: ಅಜಾಗರೂಕತೆ ನಿರ್ಲಕ್ಷತನದಿಂದ ಕಾರು ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.

ಕಾರು ಚಾಲಕ ಕೃಷ್ಣ ರವರ ವಿರುದ್ಧ ಸ್ಕೂಟರ್ ಸವಾರ ವಿಟ್ಲ ಬೊಬ್ಬೆಕೇರಿ ನಿವಾಸಿ ಪ್ರಕಾಶ್ ವಿ ಠಾಣೆಗೆ ದೂರು ನೀಡಿದ್ದಾರೆ.

ಅ.23 ರಂದು ಮಂಜೇಶ್ವರದ ಚೇವಾರಿನಿಂದ ವಿಟ್ಲದಲ್ಲಿರುವ ಮನೆಗೆ ಪತ್ನಿ ಮತ್ತು ಮಗನ ಜೊತೆ ಸ್ಕೂಟರ್ ನಲ್ಲಿ ಬರುತ್ತಿರುವಾಗ, ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಮುಚ್ಚಿರಪದವು ಎಂಬಲ್ಲಿಗೆ ತಲುಪಿದಾಗ ಹಿಂದಿನಿಂದ ಬರುತ್ತಿದ್ದ ಕೃಷ್ಣ ರವರು ಚಲಾಯಿಸುತ್ತಿದ್ದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಚಾಲಕ ಕೃಷ್ಣ ರವರು ಅಜಾಗರೂಕತೆ ನಿರ್ಲಕ್ಷತನದಿಂದ ಕಾರು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಹಿನ್ನೆಲೆ ಸ್ಕೂಟರ್ ಚಾಲಕ ಪ್ರಕಾಶ್, ಅವರ ಪತ್ನಿ ಮತ್ತು ಮಗ ಗಾಯಗೊಂಡಿದ್ದು, ಅಜಾಗರೂಕತೆ ನಿರ್ಲಕ್ಷತನದಿಂದ ಕಾರು ಚಲಾಯಿಸಿದ ಚಾಲಕ ಕೃಷ್ಣ ರವರು ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 163/2022 ಕಲಂ: 279,337 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *

You may have missed

error: Content is protected !!