July 3, 2026

ಬಾಂಗ್ಲಾದೇಶದಲ್ಲಿ ಚಂಡಮಾರುತ: 9 ಮಂದಿ ಬಲಿ

0
image_editor_output_image-1518435352-1666675302111.jpg

ಢಾಕಾ: ಇತ್ತ ಭಾರತ ದೀಪಾವಳಿ ಸಂಭ್ರಮದಲ್ಲಿದ್ದರೆ, ಅತ್ತ ನೆರೆಯ ಬಾಂಗ್ಲಾ ದೇಶವು ಚಂಡಮಾರುತದಿಂದ ತತ್ತರಿಸುತ್ತಿದೆ. ಸಿತ್ರಂಗ್ ಚಂಡಮಾರುತವು ಬಾಂಗ್ಲಾ ದೇಶದಲ್ಲಿ ಇದುವರೆಗೆ 9 ಬಲಿ ಪಡೆದಿದೆ.

ಕುಮಿಲ್ಲಾದಲ್ಲಿ ಒಂದು ಕುಟುಂಬದ ಮೂವರು, ಭೋಲಾದಲ್ಲಿ ಇಬ್ಬರು ಮತ್ತು ನರೈಲ್, ಶರಿಯತ್‌ಪುರ, ಬರ್ಗುನಾ ಮತ್ತು ಢಾಕಾದಲ್ಲಿ ತಲಾ ಒಬ್ಬರು ಸೇರಿದಂತೆ9 ಮಂದಿ ಅಸುನೀಗಿದ್ದಾರೆ. ಭಾರೀ ಗಾಳಿಗೆ ಬೇರು ಸಮೇತ ಮರಗಳು ನೆಲಕ್ಕುರುಳಿದಿವೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಚಂಡಮಾರುತದ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್‌ಗಳು ಮತ್ತು ಇಂಟರ್ನೆಟ್ ಸೇವೆಗಳ ಮೇಲೂ ಪರಿಣಾಮ ಬೀರಿದೆ. ನೆಟ್‌ವರ್ಕ್ ಪುನಃಸ್ಥಾಪಿಸಲಾಗಿದ್ದು, ಪಿರೋಜ್‌ ಪುರ ಮತ್ತು ಮದರಿಪುರ ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!