July 3, 2026

ಕೊಯಮತ್ತೂರು: ಕಾರು ಸ್ಫೋಟ ಪ್ರಕರಣ, ಐವರ ಬಂಧನ

0
image_editor_output_image321808523-1666675015951.jpg

ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರಿನ ಉಕ್ಕಡಂ ದೇವಾಲಯದ ಬಳಿ ನಡೆದಿದ್ದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ನಡೆದಿದ್ದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು.

ಜೆಮಿಶಾ ಮುಬೀನ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಭಾನುವಾರ ಮುಂಜಾನೆ ಸಿಲಿಂಡರ್‌ ಸ್ಫೋಟವಾಗಿತ್ತು. ಈ ವೇಳೆ ಮುಬೀನ್‌ ಮೃತಪಟ್ಟಿದ್ದರು. ಬಾಂಬ್‌ಗಳನ್ನು ತಯಾರಿಸಲು ಬಳಸುವ ಪೊಟ್ಯಾಸಿಯಮ್ ನೈಟ್ರೇಟ್‌ನಂತಹ ವಸ್ತುಗಳು ಕಾರಿನಲ್ಲಿ ಪತ್ತೆಯಾಗಿದ್ದವು.

ಘಟನೆಯ ಕುರಿತು ಉಕ್ಕಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಮುಹಮ್ಮದ್ ತಲ್ಕಾ, ಮುಹಮ್ಮದ್ ಅಜರುದ್ದೀನ್, ಮುಹಮ್ಮದ್ ರಿಯಾಜ್, ಫಿರೋಜ್ ಇಸ್ಮಾಯಿಲ್ ಮತ್ತು ಮುಹಮ್ಮದ್ ನವಾಜ್ ಇಸ್ಮಾಯಿಲ್ ಎಂದು ಅವರನ್ನು ಗುರುತಿಸಲಾಗಿದೆ. ಅವರೆಲ್ಲರೂ 20 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಇದು ಭಯೋತ್ಪದನಾ ಕೃತ್ಯ ಅಲ್ಲ ಎಂದು ಪೊಲೀಸರು ಈಗಾಗಲೇ ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!