February 2, 2026

ಮಂಗಳೂರು: ರೈಲು ನಿಲ್ದಾಣದ ಬಳಿ ನೇಣಿಗೆ ಶರಣಾದ ಅಪರಿಚಿತ ವ್ಯಕ್ತಿ

0
IMG-20221019-WA00081.jpg

ಕಂಕನಾಡಿಯ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಹತ್ತಿರ ವ್ಯಕ್ತಿಯೊಬ್ಬರು ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.

40-50 ವರ್ಷ ವಯಸ್ಸಿನ ವ್ಯಕ್ತಿಯ ಗುರುತು ಪತ್ತೆಯಾಗದಿದ್ದು, ಈ ವ್ಯಕ್ತಿ 5.5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ತೆಳ್ಳಗೆ ಮೈಕಟ್ಟು, ಬಿಳಿ /ಕಪ್ಪು ಮಿಶ್ರಿತ ತಿಳಿ ಗಡ್ಡ, ಮೀಸೆ ಹೊಂದಿದ್ದು, ನೀಲಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಬೂದು ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಇನ್ನು ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಪೊಲೀಸ್ ಇಲಾಖೆಯ ಪ್ರಕಟಣೆಯ ಪ್ರಕಾರ ವಾರೀಸುದಾರರು ಅಥವಾ ಸಂಬಂಧಿಕರು ಇದ್ದಲ್ಲಿ ಕಂಕನಾಡಿ ಪೊಲೀಸ್ ಠಾಣೆಯನ್ನು 0824-2220529 ಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!