ಹಾಫ್ ಹೆಲ್ಮೆಟ್ ಧರಿಸಿದ ಸಂಚಾರಿ ಪೊಲೀಸ್‌ಗೆ ದಂಡ – ವೈರಲ್ ಆಯ್ತು ಪೋಟೋ
ಬೆಂಗಳೂರಿನಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಸ್ಕೂಟರ್ ಓಡಿಸಿದ ಸಂಚಾರಿ ಪೊಲೀಸರೊಬ್ಬರಿಗೆ ಅದೇ ಇಲಾಖೆಯ ಮನ್ನೊಬ್ಬ ಸಂಚಾರಿ ಪೊಲೀಸ್ ದಂಡ ಹಾಕಿರುವ ಘಟನೆ ನಡೆದಿದ್ದು, ಸಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ತಮ್ಮ ಸ್ಕೂಟರ್‌ನಲ್ಲಿ ಬೆಂಗಳೂರಿನ ಆರ್‌ಟಿ ನಗರದ ಸಂಚಾರಿ ಪೊಲೀಸ್ ಸಿಬಂದಿಯೊಬ್ಬರು ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಈ ವೇಳೆ ಅವರು ಇಲಾಖೆಯಿಂದ ನೀಡಿರುವ ಹಾಫ್ ಹೆಲ್ಮೆಟ್ ಧರಿಸಿರುವುದನ್ನು ಕರ್ತವ್ಯನಿರತ ಸಂಚಾರಿ ಪೊಲೀಸ್ ಗಮನಿಸಿದ್ದು, ಸ್ಕೂಟರ್‌ನ್ನು ತಡೆದು ನಿಲ್ಲಿಸಿ ಬಳಿಕ ಹಾಫ್ ಹೆಲ್ಮೆಟ್ ಧರಿಸಿದ್ದಕ್ಕಾಗಿ ಸಂಚಾರಿ ಪೊಲೀಸ್ ಸಿಬಂದಿಗೆ ದಂಡ ಹಾಕಿದ್ದಾರೆ.
ಇನ್ನು ಹಾಫ್ ಹೆಲ್ಮೆಟ್ ಧರಿಸಿದ ಸಂಚಾರಿ ಪೊಲೀಸ್‌ಗೆ ಮತ್ತೊಬ್ಬ ಸಂಚಾರಿ ಪೊಲೀಸ್ ದಂಡ ವಿಧಿಸುತ್ತಿರುವುದನ್ನು ಸಾರ್ವಜನಿಕರಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆ ಪೋಟೋ ಸಖತ್ ವೈರಲ್ ಆಗುತ್ತಿದೆ.





