ವಿಟ್ಲ: ಕನ್ಯಾನದಲ್ಲಿ ಅಕ್ಟೋಬರ್ 24 ರಂದು ‘ಇಂಪೀರಿಯಲ್ ಪ್ಯಾಲೇಸ್ ಮಲ್ಟಿ ಪರ್ಪಸ್ ಆಡಿಟೋರಿಯಂ’ ಶುಭಾರಂಭ
ವಿಟ್ಲ: ಕನ್ಯಾನದಲ್ಲಿ ಅಕ್ಟೋಬರ್ 24 ರಂದು ‘ಇಂಪೀರಿಯಲ್ ಪ್ಯಾಲೇಸ್ ಮಲ್ಟಿ ಪರ್ಪಸ್ ಆಡಿಟೋರಿಯಂ’ ಶುಭಾರಂಭಗೊಳ್ಳಲಿದೆ.



ಸುಸಜ್ಜಿತ ಆಡಿಟೋರಿಯಂ ನ ಉದ್ಘಾಟನೆಯನ್ನು ಬೆಳಗ್ಗೆ 8 ಘಂಟೆಗೆ ಖುರ್ರದುಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಲ್ ಕೂರತ್ ನಿರ್ವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕೆ.ಎಮ್ ಇಬ್ರಾಹಿಂ ಉಸ್ತಾದ್ ಕನ್ಯಾನ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಅಸ್ಸಯ್ಯದ್ ಅಶ್ರಫ್ ತಂಙಳ್ ಆದೂರು, ಅಸ್ಸಯ್ಯದ್ ಇಂಬಿಚ್ಚಿಕೋಯ ತಂಙಳ್ ಕಾಟುಕುಕ್ಕೆ, ಜಲಾಲುದ್ದೀನ್ ತಂಙಳ್ ಉಜಿರೆ, ಮಹಮ್ಮದ್ ಶಮೀಮ್ ತಂಙಳ್ ಕುಂಬೋಳ್, ಇಬ್ರಾಹಿಂ ಬಾತಿಶ್ ತಂಙಳ್ ಆನೆಕಲ್ಲು, ಶಿಹಾಬುದ್ದೀನ್ ತಂಙಳ್ ಮದಕ, ಮಹ್ಮೂದ್ ಫೈಝಿ ವಾಲೆಮುಂಡೋವ್, ಡಾ. ಎಮ್. ಎಸ್ ಮೂಸಬ್ಬ (ಪ್ರಿನ್ಸಿಪಾಲ್ ಏನೆಪೋಯ ಮೆಡಿಕಲ್ ಕಾಲೇಜು) ಅಬ್ದುಲ್ ಹಕೀಮ್ ಮದನಿ ಕರೋಪಾಡಿ, ಮೊಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ ಕುಕ್ಕಾಜೆ ನಿರ್ವಹಿಸಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಫಾದರ್ ಸುನಿಲ್ ಪ್ರವೀಣ್ ಪಿಂಟೋ, ಯು.ಟಿ ಖಾದರ್, ರಾಜೇಶ್ ನಾಯ್ಕ್, ಮಂಜುನಾಥ್ ಬಂಡಾರಿ, ರಮಾನಾಥ ರೈ, ಎ.ಕೆ.ಎಮ್ ಅಶ್ರಫ್, ಐವನ್ ಡಿ ಸೋಜ, ಮಿಥುನ್ ರೈ, ಅಬ್ದುಲ್ ರಹಿಮಾನ್, ಇನಾಯತ್ ಅಲಿ, ಎಮ್. ಎಸ್ ಮಹಮ್ಮದ್, ಮುಹಮ್ಮದ್ ಕುಂಞ ವಿಟ್ಲ, ಹೆಚ್. ಇ. ನಾಗರಾಜ್, ಕೆ. ಪಿ ರಘುರಾಮ್ ಶೆಟ್ಟಿ, ಹಾಜಿ ಎ. ಉಸ್ಮಾನ್ ಕರೋಪಾಡಿ, ಈಶ್ವರ್ ಭಟ್, ಹೇಮನಾಥ್ ಶೆಟ್ಟಿ ಕಾವು, ಶಾಕಿರ್ ಅಳಕೆಮಜಲು ಭಾಗವಹಿಸಲಿದ್ದಾರೆ.
ಪ್ರಸ್ತುತ ಇಂಪೀರಿಯಲ್ ಪ್ಯಾಲೇಸ್ ಆಡಿಟೋರಿಯಂ 1200 ಆಸನದ ವ್ಯವಸ್ಥೆ, 1000 ಏಕ ಕಾಲಕ್ಕೆ ಊಟದ ವ್ಯವಸ್ಥೆ, 250 ಪಾರ್ಕಿಂಗ್ ಮತ್ತು ಹವಾ ನಿಯಂತ್ರಿತ ರೂಂ ವ್ಯವಸ್ಥೆ ಇದೆ.
ಮೊದಲ ಬುಕ್ ಮಾಡುವ 20 ಗ್ರಾಹಕರಿಗೆ 30% ಡಿಸ್ಕೌಂಟ್ ಇದ್ದು, ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಹಾಗೂ ಧಾರ್ಮಿಕ, ಸಾಮಾಜಿಕ ರಾಜಕೀಯ ಕಾರ್ಯಕ್ರಮಗಳಿಗೆ ಮಿತ ದರದಲ್ಲಿ ಲಭ್ಯವಿದೆ ಎಂದು ಮಾಲಕರಾದ ಶರೀಫ್ ಬನಾರಿ ಮತ್ತು ಇಸ್ಮಾಯಿಲ್ ತಿಳಿಸಿದ್ದಾರೆ. ಮುಂಗಡ ಬುಕ್ಕಿಂಗ್ ಮಾಡಲು 7025616511, 9611616511, 9964532416, 9449102282 ಕರೆ ಮಾಡಬಹುದು.




