ಟ್ರಾಫಿಕ್ ನಿಯಮ ಉಲ್ಲಂಘಿಸಿದರೂ ಸಾರ್ವಜನಿಕರಿಗೆ ದಂಡ ಹಾಕಬೇಡಿ: ಪೊಲೀಸರಿಗೆ ಗುಜರಾತ್ ಸಿಎಂ ಸೂಚನೆ
ಗಾಂಧಿನಗರ: ದೀಪಾವಳಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ತವರೂರು ಗುಜರಾತ್‍ನಲ್ಲಿ ಅ.21 ರಿಂದ 27ರ ವರೆಗೆ ಸಂಚಾರ ನಿಯಮ ಉಲ್ಲಂಘಿಸಿದರೂ ಸಾರ್ವಜನಿಕರಿಗೆ ದಂಡ ಪ್ರಯೋಗಿಸದಂತೆ ಗುಜರಾತ್ ಸಿಎಂ ಭೊಪೇಂದ್ರ ಪಟೇಲ್ ಸೂಚಿಸಿದ್ದಾರೆ.
ಅ.21 ರಿಂದ 27 ರವರೆಗೆ 7 ದಿನಗಳ ಕಾಲ ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೂ ಪೊಲೀಸರು ದಂಡ ಹಾಕಬೇಡಿ ಎಂದು ಸರ್ಕಾರ ಸೂಚಿಸಿದೆ. ಈ ಮೂಲಕ ಜನಪರ ಕಾಳಜಿ ವ್ಯಕ್ತಪಡಿಸಿದೆ.




