February 2, 2026

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ರಿಗೆ 5 ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಲ್ಲಿರದಂತೆ ನಿಷೇಧ

0
image_editor_output_image1906558012-1666346654622.jpg

ಇಸ್ಲಾಮಾಬಾದ್: ಬೇರೆ ದೇಶಗಳ ನಾಯಕರಿಂದ ಸ್ವೀಕರಿಸಿದ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಪಾಕಿಸ್ತಾನ ಚುನಾವಣಾ ಆಯೋಗ ಶುಕ್ರವಾರ ಕ್ರಮ ಕೈಗೊಂಡಿದೆ.

ಸಂವಿಧಾನದ 63(1)(3) ವಿಧಿ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಇಮ್ರಾನ್‌ ಅವರಿಗೆ ಐದು ವರ್ಷಗಳ ಕಾಲ ಸಾರ್ವಜನಿಕ ಹುದ್ದೆಯಲ್ಲಿರದಂತೆ ನಿಷೇಧ ಹೇರಲಾಗಿದೆ.

‘ಇಮ್ರಾನ್‌ ಖಾನ್‌ ಅವರು ಆಸ್ತಿ ಘೋಷಣೆ ವೇಳೆ ‘ತೋಷಖಾನ’ (ಸರ್ಕಾರಿ ಖಜಾನೆ) ಸ್ವೀಕರಿಸಿರುವ ಉಡುಗೊರೆಗಳ ಕುರಿತ ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ ಸಂವಿಧಾನದ 62 (1)(ಎಫ್‌) ವಿಧಿ ಅಡಿಯಲ್ಲಿ ಬದುಕಿರುವವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಅವರ ಮೇಲೆ ನಿರ್ಬಂಧ ಹೇರಬೇಕು’ ಎಂದು ಆಡಳಿತರೂಢ ಪಾಕಿಸ್ತಾನ ಡೆಮಾಕ್ರಟಿಕ್‌ ಮೂವ್‌ಮೆಂಟ್‌ (ಪಿಡಿಎಂ) ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.

Leave a Reply

Your email address will not be published. Required fields are marked *

error: Content is protected !!