August 20, 2026

ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ ಅಪರಿಚಿತ ‌ವ್ಯಕ್ತಿ

0
image_editor_output_image-391076574-1636522620303.jpg

ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಹಠಾತ್ತನೆ ಕಾರಿನಿಂದ ಇಳಿದು ವಿದ್ಯಾರ್ಥಿನಿಯತ್ತ ಬಂದಿದ್ದು ಬಾಲಕಿ ಓಡಿ ಹೋಗಿ ಆತನಿಂದ ತಪ್ಪಿಸಿಕೊಂಡು ಘಟನೆ ಕೊಡಿಂಬಳ ಗ್ರಾಮದ ಮಡ್ಯಡ್ಕ ಸಮೀಪ ನವೆಂಬರ್ 9ರ ಸಂಜೆ ಸಂಭವಿಸಿದೆ.

ಕಡಬ ಸರಸ್ವತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕೋಡಿಂಬಾಳ ದಿಂದ ಮಡ್ಯಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು ಉಂಡಿಲ ಕ್ರಾಸ್ ನಲ್ಲಿ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಕಾರನ್ನು ಹಠಾತ್ತನೆ ನಿಲ್ಲಿಸಿ ಬಾಲಕಿಯತ್ತ ಬಂದಿದ್ದ. ಬಾಲಕಿ ಹೆದರಿ ಓಡಲಾರಂಭಿಸಿದ್ದಾಳೆ. ಆದರೂ ಅಪರಿಚಿತ ವ್ಯಕ್ತಿ ಸ್ವಲ್ಪ ದೂರ ಆಕೆಯನ್ನು ಹಿಂಬಾಲಿಸಿ ಕಲ್ಲನ್ನು ಎಸೆಯಲು ಪ್ರಯತ್ನಿಸಿದ್ದ ಬಳಿಕ ಕಾರು ಹತ್ತಿ ಹೋಗಿದ್ದಾನೆ ಎಂದು ಬಾಲಕಿ ವಿವರಿಸಿದ್ದಾಳೆ. ಬಾಲಕಿ ತಂದೆ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!