March 20, 2026

ಮಹಿಳೆಯನ್ನು ಪ್ರಜ್ಞಾಹೀನಗೊಳಿಸಿ ಅತ್ಯಾಚಾರ ಎಸಗಿದ ದಂತವೈದ್ಯ

0
Screenshot_2021-11-10-10-52-40-02_40deb401b9ffe8e1df2f1cc5ba480b12.jpg

ಲಖನೌ: ದಂತವೈದ್ಯನೊಬ್ಬ 32 ವರ್ಷದ ಮಹಿಳೆಯನ್ನು ಪ್ರಜ್ಞಾಹೀನಗೊಳಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮಹಿಳೆಗೆ ಚುಚ್ಚುಮದ್ದನ್ನು ನೀಡಿ ಆಕೆಯನ್ನು ಪ್ರಜ್ಞಾಹೀನಗೊಳಿಸಿ ಆರೋಪಿ ಈ ಕೃತ್ಯವೆಸಗಿದ್ದಾನೆ. ಅಲ್ಲದೇ ಘಟನೆಯ ವಿಡಿಯೋವನ್ನು ಕೂಡ ಚಿತ್ರೀಕರಿಸಿದ್ದಾರೆ. ದಂತವೈದ್ಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಹಲ್ಲುನೋವಿನಿಂದ ಬಳಲುತ್ತಿದ್ದು, ಅಕ್ಟೋಬರ್ 16 ರಂದು ಸೈದ್ ಪುರ ಹಾಕಿನ್ಸ್ ಪ್ರದೇಶದ ದಂತ ಚಿಕಿತ್ಸಾಲಯಕ್ಕೆ ಬಂದಿದ್ದರು. ಅಲ್ಲಿ ದಂತವೈದ್ಯ ಆಕೆಯ ಹಲ್ಲು ತೆಗೆಯಬೇಕು ಎಂದು ಹೇಳಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ನಗರ) ರವೀಂದ್ರ ಕುಮಾರ್ ತಿಳಿಸಿದ್ದಾರೆ.

ವೈದ್ಯರ ವಿರುದ್ಧ ಇಜ್ಜತ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲಿಂದ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವೈದ್ಯರನ್ನು ಜೈಲಿಗೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!