August 20, 2026

ತಮಿಳುನಾಡಿನ ಹಲವೆಡೆ ಭಾರಿ ಮಳೆ:
ಐದು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

0
image_editor_output_image-96288850-1636520554963.jpg

ಚೆನ್ನೈ: ತಮಿಳುನಾಡಿನ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಕಡಲೂರು, ವಿಲುಪುರಂ, ಶಿವಗಂಗಾ, ರಾಮನಾಥಪುರಂ, ಕರೈಕಲ್‌ಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಚೆನ್ನೈ ನಗರದ ಹಲವೆಡೆ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸಂಚಾರಕ್ಕೆ ತೊಡಕಾಗಿದೆ. ನಾಗಪಟ್ಟಣಂನಲ್ಲಿ ಭಾರಿ ಮಳೆಯಾಗುತ್ತಿದೆ. ಚೆನ್ನೈ, ಕಂಚೀಪುರಂ, ತಿರುವಳ್ಳೂರ್, ಚೆಂಗಲ್‌ಪಟ್ಟು, ಕಡಲೂರು, ನಾಗಪಟ್ಟಣಂ, ತಾಂಜಾವೂರ್, ತಿರುವಾರೂರ್ ಹಾಗೂ ಮಯಿಲದುತರೈಗಳಲ್ಲಿ ಬಾರಿ ಮಳೆಯ ಕಾರಣ ಎರಡು ದಿನಗಳ ರಜೆ ಘೋಷಿಸಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಪರಿಣಾಮವಾಗಿ ಮುಂದಿನ ಕೆಲವು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *

You may have missed

error: Content is protected !!