200 ಕೋಟಿ ಸುಲಿಗೆ ಪ್ರಕರಣ:
ಐವರು ತಿಹಾರ್ ಜೈಲು ಅಧಿಕಾರಿಗಳ ಬಂಧನ
ದೆಹಲಿ: ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ದರೋಡೆಕೋರ ಸುಖೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ ರೂ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ತಿಹಾರ್ ಜೈಲಿನ ಅಧಿಕಾರಿಗಳನ್ನು ಬಂಧಿಸಿದೆ.
ಮೂಲಗಳ ಪ್ರಕಾರ, 2020 ಮತ್ತು 2021 ರಲ್ಲಿ ಕೈಗಾರಿಕೋದ್ಯಮಿಯೊಬ್ಬನ ಪತ್ನಿಯಿಂದ ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ಸುಲಿಗೆ ಮಾಡಲು ಎಲ್ಲಾ ಐವರು ಅಧಿಕಾರಿಗಳು ಸಹಾಯ ಮಾಡಿದ್ದಾರೆ.
ಆರೋಪಿ ಸುಕೇಶ್ ಹಲವು ಜೈಲು ಅಧಿಕಾರಿಗಳ ನೆರವಿನೊಂದಿಗೆ ತನ್ನ ಸಂಘಟಿತ ಅಪರಾಧದ ದಂಧೆ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಬಂಧಿತ ಅಧಿಕಾರಿಗಳನ್ನು ಸುನೀಲ್ ಕುಮಾರ್, ಸುಂದರ್ ಬೋರಾ, ಮಹೇಂದ್ರ ಪ್ರಸಾದ್ ಸುಂದರಿಯಾಲ್, ಲಕ್ಷ್ಮೀ ದತ್ ಮತ್ತು ಪ್ರಕಾಶ್ ಚಂದ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ಸಹಕರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.





