March 25, 2026

ಅಖ್ಲಾಕ್‌ ಹತ್ಯೆ ಪ್ರಕರಣ: ಸರ್ಕಾರದ ಆದೇಶ ಉಲ್ಲಂಘಿಸಿದಕ್ಕೆ ಬಿಜೆಪಿ ನಾಯಕನಿಗೆ 800 ರೂ. ದಂಡ

0
Screenshot_2022-10-14-10-10-55-01_680d03679600f7af0b4c700c6b270fe7.jpg

ನೊಯಿಡಾ: 2015ರ ಮೊಹಮ್ಮದ್‌ ಅಖ್ಲಾಕ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಕ್ಕೆ ಬಿಜೆಪಿಯ ವಿವಾದಿತ ನಾಯಕ ಸಂಗೀತ್‌ ಸೋಮ್‌ಗೆ ಗೌತಮ್‌ ಬುದ್ಧ ನಗರದ ಕೋರ್ಟ್‌ ದಂಡ ವಿಧಿಸಿದೆ.

ಸೂರಜ್‌ಪುರ ಕೋರ್ಟ್‌ನ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ಪ್ರದೀಪ್‌ ಕುಮಾರ್‌ ಕುಶ್ವಾಹ ಅವರು ಬಿಜೆಪಿ ಮಾಜಿ ಶಾಸಕ ಸರ್ಕಾರಿ ಆದೇಶ ಉಲ್ಲಂಘನೆಯ ಐಪಿಸಿ ಸೆಕ್ಷನ್‌ 188 ಅಡಿ ತಪ್ಪಿತಸ್ಥ ಎಂದು ಕಂಡುಬಂದ ಹಿನ್ನೆಲೆ ₹ 800 ದಂಡ ವಿಧಿಸಿದ್ದಾರೆ ಎಂದು ಸಹಾಯಕ ಪ್ರಾಸಿಕ್ಯೂಷನ್‌ ಅಧಿಕಾರಿ ಪ್ರೇಮಲತಾ ಯಾದವ್‌ ಹೇಳಿದ್ದಾರೆ.

ದಾದ್ರಿಯಲ್ಲಿ ಅಖ್ಲಾಕ್‌ ಹತ್ಯೆಗೆ ಸಂಬಂಧಿಸಿ ಹೇರಲಾಗಿದ್ದ ಸಿಆರ್‌ಪಿಸಿ 144ರ ಅಡಿ ಆ ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ನಿಷೇಧಿತ ಪ್ರದೇಶದಲ್ಲಿ ಸೇರುವಂತಿಲ್ಲ ಎಂದು ಪ್ರೇಮಲತಾ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!