March 23, 2026

ಪ್ರೇಯಸಿ ಜತೆ ಗಂಡನ ಫೋಟೋ ನೋಡಿ, ಸಾವಿಗೆ ಶರಣಾದ ನವವಿವಾಹಿತೆ ಯುವತಿ: ಪ್ರೇಯಸಿ ಜೊತೆಗೆ ರೋಮ್ಯಾನ್ಸ್ ಮಾಡುತ್ತಿದ್ದಾನೆಂದು ನೊಂದ ಯುವತಿ

0
image_editor_output_image-296382661-1665682392324

ಚಿಕ್ಕಬಳ್ಳಾಪುರ: ತವರು ಮನೆಯಲ್ಲೇ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್ ನೋಟ್ ಬರೆದು ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದ ಹೆಣ್ಣೂರು ಕದಿರೇನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ಗ್ರಾಮದ ದೇವಮ್ಮ-ಮುನಿರಾಜು ದಂಪತಿ ಹಿರಿಯ ಪುತ್ರಿ ಮೋನಿಕಾ (22) ಮೃತ ದುರ್ದೈವಿಯಾಗಿದ್ದಾಳೆ.

ಮೃತ ಮೋನಿಕಾಳನ್ನು ಚಿಕ್ಕಬಳ್ಳಾಪುರ ನಗರದ ನಿವಾಸಿ ಭಾರ್ಗವ್ ಕಳೆದ ತಿಂಗಳ ಹಿಂದೆಯಷ್ಟೇ ಶಾಸ್ತ್ರೋಕ್ತವಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದ.

ಮದುವೆಯಾಗಿ 6 ತಿಂಗಳ ಕಾಲ ಹೆಂಡತಿ ಜೊತೆ ಸಂಸಾರ ಮಾಡಿದ  ಇತ್ತೀಚೆಗಷ್ಟೇ ಗೌರಿ ಹಬ್ಬಕ್ಕೆ ಹೆಂಡತಿಯನ್ನು ತವರು ಮನೆಗೆ ಬಿಟ್ಟು ಹೋಗಿದ್ದ.

ಹಬ್ಬ ಮುಗಿದ ಮೇಲೆ ಗಂಡ ಬಂದು ಮನೆಗೆ ವಾಪಸ್ ಕರೆದುಕೊಂಡು ಹೋಗುತ್ತಾನೆ ಎಂದು ಮೋನಿಕಾ ಕಾಯುತ್ತಿದ್ದಳು.

ಆದರೆ ಗಂಡ ಬರಲೇ ಇಲ್ಲ ಮತ್ತು ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಇದೇ ವೇಳೆ ಗಂಡ ಪ್ರೇಯಸಿ ಜೊತೆ ಸುತ್ತಾಡುತ್ತಿರುವ ಫೋಟೋಗಳು ಮೋನಿಕಾಳ ಕಣ್ಣಿಗೆ ಬಿದ್ದಿವೆ.

ಇದರಿಂದ ಕಟ್ಟಿಕೊಂಡ ಗಂಡ ತನ್ನನ್ನು ಬಿಟ್ಟು ಪ್ರೇಯಸಿ ಜೊತೆಗೆ ರೋಮ್ಯಾನ್ಸ್ ಮಾಡುತ್ತಿದ್ದಾನೆಂದು ಮನನೊಂದ ಮೋನಿಕಾ ತವರು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸಾಯುವ ಮುನ್ನ ತನ್ನ ಸಾವಿಗೆ ಗಂಡನೇ ಕಾರಣ ಅಂತ ಡೆತ್‍ನೋಟ್‍ನಲ್ಲಿ ಮೋನಿಕಾ ಬರೆದಿದ್ದಾಳೆ.

ಇದೀಗ ಈ ಸಂಬಂಧ ಮೋನಿಕಾ ತಂದೆ ತಾಯಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಂಡ ಭಾರ್ಗವ್ ವಿರುದ್ಧ ದೂರು ದಾಖಲಿಸಿದ್ದು ಭಾರ್ಗವ್ ತಲೆಮರೆಸಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!