March 25, 2026

ಪುತ್ತೂರು: ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದು ಪರಾರಿ: ಗಾಯಾಳು ಆಸ್ಪತ್ರೆಗೆ ದಾಖಲು

0
image_editor_output_image851228542-1665681436051

ಪುತ್ತೂರು: ಪಾದಾಚಾರಿಗೆ ಡಿಕ್ಕಿ ಹೊಡೆದು ಓಮ್ನಿ ಕಾರು ಪರಾರಿಯಾದ ಘಟನೆ ನೆಹರುನಗರದಲ್ಲಿ ನಡೆದಿದೆ.

ಘಟನೆಯಿಂದಾಗಿ ಗಾಯಗೊಂಡ ಪಾದಾಚಾರಿ ನೈತಾಡಿ ರಾಮಕೃಷ್ಣ ಎಂದು ತಿಳಿದು ಬಂದಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

ರಾಮಕೃಷ್ಣ ರವರು ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಓಮ್ನಿ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!