ಕರಾವಳಿಯಲ್ಲಿ ಭಯಾನಕ ಚರ್ಮಗಂಟು ರೋಗ : ದಕ್ಷಿಣ ಕನ್ನಡದಲ್ಲೂ ಒಂದು ಪ್ರಕರಣ ದಾಖಲು- ಕರಾವಳಿಗರಲ್ಲಿ ಆತಂಕ
ಮಂಗಳೂರು : ರಾಜ್ಯಾದ್ಯಂತ ಕಾಡುತ್ತಿದ್ದು ಈಗಾಗಲೇ ಸಾವಿರಕ್ಕೂ ಅಧಿಕ ಜಾನುವಾರುಗಳನ್ನು ಬಲಿ ಪಡೆದ ಕಿಲ್ಲರ್ ಗಂಟು ರೋಗ ರಾಜ್ಯದ ಕರಾವಳಿಗೂ ವಕ್ಕರಿಸಿದ್ದು ದಕ್ಷಿಣ ಕನ್ನಡದ ಜಿಲ್ಲೆಯಲ್ಲೂ ಒಂದು ಪ್ರಕರಣ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಹೈನುಗಾರರಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಇನ್ನಿಲ್ಲದಂತೆ ಕಾಡುತ್ತಿದೆ. ಈವರೆಗೆ ರಾಸುಗಳು ಚರ್ಮ ಗಂಟು ರೋಗದಿಂದ ಬಳಲುತ್ತಿರುವುದು ವರದಿಯಾಗಿದೆ.
15 ಸಾವಿರದಷ್ಟು ರಾಸುಗಳು ಚೇತರಿಸಿಕೊಂಡರೆ ಸಾವಿಕ್ಕೂ ಅಧಿಕ ಜಾನುವಾರುಗಳು ರೋಗ ಉಲ್ಭಣಿಸಿ ಮೃತಪಟ್ಟಿವೆ. ಸರ್ಕಾರದಿಂದ ಈಗಾಗಲೇ 3 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದ್ದು ಪರಿಹಾರ ಮತ್ತು ಚಿಕಿತ್ಸೆಗಾಗಿ 2 ಕೋಟಿ ರೂಪಾಯಿಗಳನ್ನು ತುರ್ತಾಗಿ ಬಿಡುಗಡೆ ಮಾಡಲಾಗಿದೆ ಜೊತೆಗೆ ಈ ರೋಗ ಅಧ್ಯಾಯನಕ್ಕಾಗಿ ತಜ್ಞರ ತಂಡ ಕಳುಹಿಸಿ ಕೊಡಲು ಕೇಂದ್ರಕ್ಕೆ ರಾಜ್ಯ ಮನವಿ ಮಾಡಿದೆ. ಆಗಸ್ಟ್ 1ರಿಂದ ಈಚೆಗೆ ಚರ್ಮ ಗಂಟು ರೋಗದಿಂದ ಮೃತಪಟ್ಟಿರುವ ಪ್ರತಿ ರಾಸುಗಳಿಗೆ ತಲಾ 20,000, ಎತ್ತುಗಳಿಗೆ ತಲಾ 30,000 ಮತ್ತು ಕರುಗಳಿಗೆ ತಲಾ 5,000 ಪರಿಹಾರ ನೀಡಲು ಸರ್ಕಾರ ಸೂಚಿಸಿದೆ.
ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಭಯಾನಕ ರೋಗ ಕಾಣಿಸಿಕೊಂಡಿದ್ದು ಒಂದು ಪ್ರಕರಣ ದಾಖಲಾಗಿದೆ. ಇದನ್ನು ಪಶು ಸಂಗೋಪನ ಇಲಾಖಾಧಿಕಾರಿಗಳು ಧೃಡಪಡಿಸಿದ್ದಾರೆ. ಈ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಲು ಪಶು ಸಂಗೋಪನ ಇಲಾಖೆ ಕಾರ್ಯೋನ್ಮಖವಾಗಿದ್ದು ಮುಖ್ಯವಾಗಿ ಹೈನುಗಾರಿಕೆ ನಡೆಸುವ ಕೃಷಿಕರು ಎಚ್ಚರಿಕೆ ಮತ್ತು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಮುಂಜಾಗ್ರತೆ ಕ್ರಮಗಳೇನು?
ರೋಗ ಬಾಧಿತ ಹಸುಗಳಿಂದ ಉಳಿದ ಹಸುಗಳ ಬೇರ್ಪಡಿಸುವುದು
ರೋಗ ಕಂಡುಬಂದ ಗ್ರಾಮ ಐದು ಕಿ.ಮೀ. ಸುತ್ತಲಿನ ಗ್ರಾಮಗಳಿಗೆ ಲಸಿಕೆ
ರೋಗ ಲಕ್ಷಣದ ಹಸುಗಳ ಪ್ರತ್ಯೇಕತೆ ಉತ್ತಮ
ರಾಸುಗಳ ಮಾರಾಟ, ಸಾಗಣೆ ಸಂಪೂರ್ಣ ನಿಷೇಧಿಸುವುದು
ಕೊಟ್ಟಿಗೆಯ ಶುಚಿತ್ವ ಕಾಪಾಡುವುದು
ಉಣ್ಣೆ ನಿವಾರಣೆಗೆ ಒತ್ತು ನೀಡುವುದು
ಗಾಯಕ್ಕೆ ಬೇವು, ಕೊಬ್ಬರಿ ಎಣ್ಣೆ ಬಳಕೆ ಉತ್ತಮ





