February 2, 2026

ವಿಟ್ಲದ ದೀಪಕ್
ದೀಪಕ್ ವಾಚ್ ವರ್ಕ್ಸ್ ನಲ್ಲಿ ಶಟರ್ ನಲ್ಲಿ Name jihad ಬರಹ: ಪ್ರಕರಣ ದಾಖಲು

0
image_editor_output_image1668258012-1665594009243

ವಿಟ್ಲ: ಅಂಗಡಿಯೊಂದರ ಶಟರ್ ನಲ್ಲಿ ಯಾರೋ ಕಿಡಿಗೇಡಿಗಳು ‘Name jihad’ ಎಂದು ಬರೆದ ಘಟನೆ ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್ ನಲ್ಲಿ ನಡೆದಿದೆ.

ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಅ.12 ರಂದು ಮುಂಜಾನೆ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಬಗ್ಗೆ ಅಂಗಡಿ ಮಾಲೀಕ ಅಬ್ದುಲ್ ವಿಟ್ಲ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ..

Leave a Reply

Your email address will not be published. Required fields are marked *

error: Content is protected !!