February 2, 2026

ಬಿ.ಸಿ ರೋಡ್: ಹಾಡಹಗಲೇ ಕ್ಯಾಸ್ ಡ್ರಾಯರ್ ಗೆ ಕೈ ಹಾಕಿ ಹಣ ಕಳ್ಳತನ: ಘಟನೆ ದೃಶ್ಯ ಸಿ.ಸಿ ಕ್ಯಾಮಾರದಲ್ಲಿ ಸೆರೆ

0
image_editor_output_image-715670893-1665572035958

ಬಂಟ್ವಾಳ: ಹಾಡುಹಗಲೇ ಬಿಸಿರೋಡಿನ ಹೃದಯ ಭಾಗದ ಅಂಗಡಿಯೊಂದರಿಂದ ಕ್ಯಾಸ್ ಡ್ರಾಯರ್ ಗೆ ಕೈ ಹಾಕಿ ಹಣ ಕಳ್ಳತನ ಮಾಡುವ ದೃಶ್ಯ ವೊಂದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಿಸಿರೋಡಿನ ತಾಲೂಕು ‌ಆಡಳಿತ ಕೇಂದ್ರ (ಮಿನಿ ವಿಧಾನ ಸೌಧದ ಕಚೇರಿ) ಮುಂಭಾಗದಲ್ಲಿರುವ ಎಸ್.ಆರ್.ಟಯರ್ ಮಾಲಕ ಸಂದೀಪ್ ಅವರ ಅಂಗಡಿಯಿಂದ ಕಳ್ಳನೊರ್ವ ಹಣ ಎಗರಿಸುವ ದೃಶ್ಯ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಆ.11 ರಂದು ಸುಮಾರು 12 ಗಂಟೆ ವೇಳೆಗೆ ಮಾಲಕ ಸಂದೀಪ್ ಅವರು ಅಂಗಡಿ ಮುಂಭಾಗದಲ್ಲಿ ಕಾರೊಂದು ಅಡ್ಡ ನಿಲ್ಲಿಸಲು ಬಂದ ವೇಳೆ ಆತನನ್ನು ಬದಿಗೆ ನಿಲ್ಲಿಸುವಂತೆ ತಿಳಿಸಿ ಅಂಗಡಿಯಿಂದ ತೆರಳಿದ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡ ಕಳ್ಳ ಕೂಡಲೇ ಅಂಗಡಿ ಒಳಗೆ ನುಗ್ಗಿ, ಕ್ಯಾಸ್ ಡ್ರಾಯರ್ ಓಪನ್ ಮಾಡಿ ಅದರಲ್ಲಿದ್ದ ಸುಮಾರು 10 ಸಾವಿರ ನಗದು ಹಣವನ್ನು ದೋಚಿಕೊಂಡು ಹೋಗುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.
ಸಂದೀಪ್ ಅವರು ಹೊರಗೆ ಅಡ್ಡ ಇಟ್ಟಿದ್ದ ಕಾರನ್ನು ತೆರವುಮಾಡಲು ತಿಳಿಸಿ ವಾಪಾಸು ಬಂದು ಕ್ಯಾಸ್ ಡ್ರಾಯರ್ ಓಪನ್ ಆಗಿದ್ದು‌, ಸಂಶಯಗೊಂಡು ನೋಡಿದಾಗ ನಗದು ಹಣ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳವಾದ ಬಗ್ಗೆ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!