February 3, 2026

ಕಾರ್ಕಳ: ಉದ್ಯಮದಲ್ಲಿ‌ ನಷ್ಟ, ಸಾಲಬಾಧೆ, ಯುವಕ ಆತ್ಮಹತ್ಯೆ

0
Screenshot_2022-10-12-11-37-37-38_680d03679600f7af0b4c700c6b270fe7.jpg

ಕಾರ್ಕಳ: ಸಾಲಬಾಧೆಯಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕು ನಕ್ರೆ ಬಳಿ ನಡೆದಿದೆ.

ನಕ್ರೆ ನಿವಾಸಿ ರೋಷನ್‌ ಆತ್ಮಹತ್ಯೆ ಮಾಡಿಕೊಂಡವರು. ರೋಶನ್ ಮಂಗಳೂರಿನಲ್ಲಿ ಪಾರ್ಲೆ ಕಂಪೆನಿಯ ಏಜೆನ್ಸಿ ಉದ್ಯಮಕ್ಕಾಗಿ 25 ಲಕ್ಷ ರೂ. ಹಣ ಸಾಲ ಮಾಡಿಕೊಂಡಿದ್ದು ಇತ್ತೀಚೆಗೆ ಏಜೆನ್ಸಿ ಉದ್ಯಮದಲ್ಲಿ ನಷ್ಟ ಉಂಟಾಗಿ ಏಜೆನ್ಸಿಯನ್ನು ಮುಚ್ಚಲಾಗಿತ್ತು.

ಇದರಿಂದ ನೊಂದಿದ್ದ ರೋಷನ್ ಆಗಾಗ ಇದರ ಕುರಿತು ಮಾತನಾಡುತ್ತಿದ್ದರು ಎನ್ನಲಾಗಿದೆ. ನಿನ್ನೆ ತಡರಾತ್ರಿ ಕಿಟಕಿಯ ಸರಳಿಗೆ ಇಸ್ತ್ರೀ ಪೆಟ್ಟಿಗೆಯ ವಾಯರ್‌‌ನಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!