February 3, 2026

ಮಂಗಳೂರು: ಜಯಾನಂದ್ ಆಚಾರ್ಯ ಸಾವು ಪ್ರಕರಣ, ಆರೋಪಿಯ ಬಂಧನ

0
image_editor_output_image1696667364-1665553671162.jpg

ಮಂಗಳೂರು: ನಗರದ ಮಂದಾರಬೈಲು ನಿವಾಸಿ ಜಯಾನಂದ್ ಆಚಾರ್ಯ ಅವರ ಸಾವು ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಜಯಾನಂದ್ ಆಚಾರ್ಯ
ಕುಂಜತ್ತಬೈಲು ದೇವಿನಗರದ ರಾಜೇಶ್ ಪೂಜಾರಿ (31) ಬಂಧಿತ ಆರೋಪಿ. ಜಯಾನಂದ ಆಚಾರ್ಯ ಅವರ ಶವ ಕಳೆದ ಶನಿವಾರ ಪತ್ತೆಯಾಗಿತ್ತು.

ಬಳಿಕ ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಇದೊಂದು ಕೊಲೆ ಪ್ರಕರಣವೆಂದು ಗೊತ್ತಾಗಿತ್ತು. ಹೀಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಯಾನಂದ ನವರಾತ್ರಿ ವೇಳೆ ಹೆಣ್ಣು ಮಕ್ಕಳ ವೇಷ ಧರಿಸುತ್ತಿದ್ದರು. ಶನಿವಾರ ಅವರ ಶವವು ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಲೈಂಗಿಕ ಉದ್ದೇಶಕ್ಕೆ ಜಯಾನಂದರನ್ನು ಬಳಸಲು ಉದ್ದೇಶಿಸಿದ್ದ. ಬಳಿಕ ಹಣದ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆರೋಪಿ ಜಯಾನಂದರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!