ವಿಟ್ಲ: ಗ್ರಾ.ಪಂ ಸಿಬ್ಬಂದಿಯಿಂದ ಯುವತಿ ಮೇಲೆ ಮಾನಭಂಗ ಯತ್ನ: ಆರೋಪಿಯ ಬಂಧನ
ವಿಟ್ಲ: ಪುಣಚ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬ ಪಂಚಾಯಿತಿಗೆ ಆಗಮಿಸಿದ ಯುವತಿಯ ಕೈಹಿಡಿದೆಳೆದು ದೌರ್ಜನ್ಯ ಎಸಗಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣಚ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಸ್ಮಾನ್ (53) ಆರೋಪಿಯಾಗಿದ್ದಾನೆ. ಶುಕ್ರವಾರ ಪಂಚಾಯಿತಿಗೆ ಬಂದಿದ್ದ ಯುವತಿಯ ಕೈ ಹಿಡಿದು ಎಳೆದಿದ್ದು, ಮಂಗಳವಾರ ವಿಟ್ಲ ಠಾಣೆಗೆ ಯುವತಿ ದೂರು ನೀಡಿದ್ದಾರೆ. ದಲಿತ ದೌರ್ಜನ್ಯ ಅಡಿಯರ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.





